
ಧಾರವಾಡ ನೀರಿನ ಕುಡಿಯುವ ಸಮಸ್ಯೆ ಚರ್ಚೆ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಅವರಿಂದ ಸಭೆ
ಧಾರವಾಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಇಂದು ವಿಕಾಸಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ಅನುಸರಿಸಬೇಕು. ನೀರು ಪೂರೈಸಲು ವಿದ್ಯುತ್ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂತರ ನವಲಗುಂದ ಕ್ಷೇತ್ರದ ಶಾಸಕರಾದ ಎನ್.ಹೆಚ್. ಕೋನರೆಡ್ಡಿ ಅವರು ಮಾತನಾಡಿ, ಕರೆಂಟ್‍ನಲ್ಲಿ ಸೊಲಾರ್ ಸಿಸ್ಟಮ್‍ನ್ನು ಅಳವಡಿಸಿಕೊಂಡರೆ ಒಳ್ಳೆಯದು. ವಿದ್ಯುತ್ ಮತ್ತು…

ತುರನೂರು ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹಣೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರುದ್ರಭೂಮಿಯ ಪಕ್ಕದಲ್ಲಿ ಇರುವ ಮಲಪ್ರಭಾ ನದಿಯಿಂದ ಅಕ್ರಮವಾಗಿ ಮರಳನ್ನು ಸಾರ್ವಜನಿಕರ ಆಸ್ತಿಯಾದ ರುದ್ರ ಭೂಮಿಯಲ್ಲಿ ತಮ್ಮ ಸ್ವಂತ ಆಸ್ತಿಯಂತೆ ಎಲ್ಲಿ ನೋಡಿದರೂ ಅಲ್ಲಿ ಅಕ್ರಮ ಮರಗಳನ್ನು ಸಂಗ್ರಹಣೆ ಮಾಡಿ ರಾತ್ರಿ ವೇಳೆ ಟ್ಯಾಕ್ಟರ್ ಗಳ ಮೂಲಕ ಸಾಗಾಟ ಮಾಡುವ ಉದ್ದೇಶದಿಂದ ಅಕ್ರಮ ಮರಳನ್ನು ಸಂಗ್ರಹಿಸಿರುತ್ತಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಧಾರವಾಡದಲ್ಲಿ ಸಂವಿಧಾನ ಪೀಠಿಕೆಯ ಬೃಹತ್ ಲೋಹದ ಪ್ರತಿ ರಚನೆ; ಒಂದೂವರೆ ಟನ್ ತೂಕ; ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ ಅವರಿಂದ ಲೋಕಾರ್ಪಣೆ
ಭಾರತದ ಸಂವಿಧಾನ ರಚಿಸಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 134 ನೇ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಭಾರತ ಸಂವಿಧಾನದ ಪೀಠಿಕೆಯ ಬೃಹತ್ ಲೋಹದ ಪ್ರತಿಯನ್ನು ಸಂವಿಧಾನ ಪುಸ್ತಕ ರೀತಿಯಲ್ಲಿ ನಿರ್ಮಿಸಿ, ನಗರದ ಪ್ರಸಿದ್ದ ರಾಣಿ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಸಚಿವ ಸಂತೋಷ ಲಾಡ್ ಅವರಿಂದ ಲೋಕಾರ್ಪಣೆ ಮಾಡಲಾಯಿತು. ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಲೋಹದಲ್ಲಿ ರಚಿತ ಪೀಠಿಕೆಯನ್ನು…

ಹುಬ್ಬಳ್ಳಿ- ಧಾರವಾಡ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಗೆ ಒಪ್ಪಂದ
ಬೆಂಗಳೂರು, ಏಪ್ರಿಲ್ 12: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ನಡುವೆ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆ (Electric Rapid Transit (e-RT) ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿ, ಸಾಧಕ- ಭಾದಕಗಳ ಕುರಿತು ಚರ್ಚಿಸಲಾಯಿತು. ಉದ್ದೇಶಿತ ಯೋಜನೆಯ ಸಾಧ್ಯಾ ಸಾಧ್ಯತೆ ಮತ್ತು ಅವಕಾಶಗಳನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸಭೆಯಲ್ಲಿ ವಿವರಿಸಿದರು. ಈ ವೇಳೆ ವಿದ್ಯುತ್ ಚಾಲಿತ…

ಕೂಡ್ಲಿಗಿ , ಹೆಚ್ ಬಿ ಹಳ್ಳಿ ಕಳ್ಳತನ ಪ್ರಕರಣಗಳನ್ನು ಭೇದಿಸಿದ – ಕೂಡ್ಲಿಗಿ ಪೊಲೀಸರು ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ, ಹಗರಿಬೊಮ್ಮನಹಳ್ಳಿ ಯಲ್ಲಿ ಜರುಗಿರುವ. ಕಳ್ಳತನಗಳ ಪ್ರಕರಣಗಳನ್ನು ಕೂಡ್ಲಿಗಿ ಪೊಲೀಸರು ಭೇದಿಸಿ, ಮೂವರು ಕಳ್ಳರನ್ನು ಬಂಧಿಸಿ ಅವರಿಂದ ಭಾರೀ ಬೆಲೆಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಪಟ್ಟಣದ, 1 ನೇ ವಾರ್ಡ್ ಶ್ರೀಊರಮ್ಮ ದೇವಿ ಪಾದಗಟ್ಟೆ ಹತ್ತಿರದ ಗಲ್ಲಿ ವಾಸಿಗಳು. ಹಾಗೂ ನ್ಯಾಯಾಂಗ ಇಲಾಖೆಯ ನೌಕರರೋರ್ವರ, ಮನೆ ಕಳ್ಳತನ ಪ್ರಕರಣ ಒಳಗೊಂಡಂತೆ. ನೆರೆ…

ಧಾರವಾಡ ಜಿಲ್ಲೆಯ ಪಿಯುಸಿ ದ್ವಿತೀಯ ಫಲಿತಾಂಶದಲ್ಲಿ ಸುಧಾರಣೆ; 23 ನೇ ರ್ಯಾಂಕ್‍ದಿಂದ ರಾಜ್ಯಕ್ಕೆ 17 ನೇ ರ್ಯಾಂಕ್‍ಗೆ ಬಡ್ತಿ; ಮಿಷನ್ ವಿದ್ಯಾಕಾಶಿಯಲ್ಲಿ ಪ್ರಾಥಮಿಕ ಮತ್ತು ಪಿಯುಸಿ ಶಿಕ್ಷಣಕ್ಕೆ ಈ ವರ್ಷ ಹೆಚ್ಚು ಆದ್ಯತೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಆರಂಭವಾಗಿದ್ದು, ಕಳೆದ ವರ್ಷ ಧಾರವಾಡ ಜಿಲ್ಲೆ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ 23ನೇ ರ್ಯಾಂಕನಲ್ಲಿತ್ತು; ಆದರೆ ಈ ವರ್ಷ ಅದು ರಾಜ್ಯಕ್ಕೆ 17ನೇ ರ್ಯಾಂಕ್‍ಗೆ ಬಡ್ತಿ ಪಡೆದಿದೆ. ಜೊತೆಗೆ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 2 ಮತ್ತು ವಿಜ್ಞಾನ ವಿಭಾಗದಲ್ಲಿ 5 ರ್ಯಾಂಕ್‍ಗಳನ್ನು ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಒಟ್ಟು ಒಂಬತ್ತು ರ್ಯಾಂಕ್‍ಗಳು ಜಿಲ್ಲೆಗೆ ಬಂದಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು…

ದಾರವಾಡ ಅಧಿಕಾರಿಗಳೊಂದಿಗೆ ಮೇಲ್ಸೆತುವೆ ಕಾಮಗಾರಿಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು
ಹುಬ್ಬಳ್ಳಿ ನಗರದಲ್ಲಿ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ.50 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು. ಹುಬ್ಬಳ್ಳಿ ನಗರದ ಚನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ, ಇಂದಿರಾ ಗಾಜಿನ ಮನೆ ವೃತ್ತದಲ್ಲಿ ಪ್ರಗತಿಯಲ್ಲಿರುವ ಮೇಲ್ಸೆತುವೆ ಕಾಮಗಾರಿಯನ್ನು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಸರ್ಕ್ಯೂಟ್ ಹೌಸನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ 2022 ರಿಂದ ಮೇಲ್ಸೆತುವೆ ಕಾಮಗಾರಿ ಪ್ರಗತಿಯಲ್ಲಿದೆ….

ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸನ್ಮಾನ
ಬೆಳಗಾವಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಜಿಪಂ ಹಾಗೂ ಡಿಡಿಪಿಯು ಇಲಾಖೆ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ರ್ಯಾಂಕ್ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಬೆಳಗಾವಿ ಶೈ ಜಿಲ್ಲೆಯ ವಾಣಿಜ್ಯ ವಿಭಾಗ ದಲ್ಲಿ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ತನವಿ ಹೇಮಂತ ಪಾಟೀಲ ಪಡೆದಿದ್ದಾರೆ. ಕಾಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಮಹಾಲಕ್ಷ್ಮೀ ಮಂಜುನಾಥ ಕುಸುಗುರ 580 ಅಂಕ, ಸೈನ್ಸ್ ವಿಭಾಗದಲ್ಲಿ ಸಾನಿಯಾ ಅಮ್ಜಾದ್ ಸನದಿ…
ರಾಮದುರ್ಗದಲ್ಲಿ ಅಕ್ರಮ ಮರಳು ದಂಧೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆರಾಜಾರೋಷವಾಗಿ ನಡೆಯುತ್ತಿದ್ದರು ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಇಲ್ಲಿ ಏನು ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶನದ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ರಾಮದುರ್ಗ ಪಟ್ಟಣದಲ್ಲಿ 16 ಸಿಸಿ ಟಿವಿ ಕ್ಯಾಮೆರಾ ಇದ್ದರೂ ಕೂಡ ಇಷ್ಟೆಲ್ಲಾ ಅಕ್ರಮ ಮರಳನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವುದು ಬೇಸರದ ಸಂಗತಿಯಾಗಿದೆ. ಹಾಗಾದರೆ ರಾಮದುರ್ಗದಲ್ಲಿ 16 ಸಿಸಿಟಿವಿ ಕ್ಯಾಮೆರಾ ಇರುವುದು ಯಾಕೆ ಎಂಬುವುದು ಪ್ರಶ್ನೆಯಾಗಿದೆ? ಅಕ್ರಮ ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳಿಂದಲೇ ದಂಧೆಕೋರರಿಗೆ…

ಎನ್ಎಸ್ಎಸ್ ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ – ಡಾ ರಾಜು ಕಂಬಾರ
ರಾಮದುರ್ಗ: ರಾಷ್ಟ್ರೀಯ ಸೇವಾ ಯೋಜನೆಯು ಯುವ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ತುಂಬುವ ಸಂಘಟನೆಯಾಗಿದ್ದು, ಯುವಕರಲ್ಲಿ ನಿಷ್ಕಾಮ್ಯ ಸೇವೆ ಮಾಡುವ, ವ್ಯಕ್ತಿತ್ವ ವಿಕಸನಗೊಳಿಸಿ, ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತದೆಂದು ಸಾಹಿತಿ ಡಾ ರಾಜು ಕಂಬಾರ ಹೇಳಿದರು. ಸಿದ್ದನಗೌಡ ಪಾಟೀಲ ಅತಿಥಿ ಪರಿಚಯಿಸಿದರು.ಅರುಣ ಬಾಗಪಗೊಳ ವಂದಿಸಿದರು.