WhatsApp Group
Join Now
ಗುಬ್ಬಿ: ತಾಲೂಕಿನ ನಿಟ್ಟೂರು ಬೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಸಮರ್ಪಕ ತ್ರಿ ಫೇಸ್ ವಿದ್ಯುತ್ ನೀಡುವಲ್ಲಿ ಬೆಸ್ಕಾಂ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ರೈತರು ನಿಟ್ಟೂರು ಉಪಸ್ಥಾವರಘಟಕದ ಮುಂದೆ ದಿಡಿರ್ ಪ್ರತಿಭಟನೆ ನಡೆಸಿದರು.
ರೈತರು ಮಾತನಾಡಿ ಈ ಬಾರಿ ಸಕಾಲಕ್ಕೆ ಮಳೆ ಬಾರದೆ ಯಾವ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ. ಬೇಸಿಗೆ ಮುನ್ನವೇ ಅತಿ ಹೆಚ್ಚು ಬಿಸಿಲಿನ ಛಾಯೆ ವ್ಯಾಪಕವಾಗಿ ಹೆಚ್ಚಾಗಿದ್ದು ಇರುವ ತೆಂಗು ಅಡಿಕೆ ಬೆಳೆಯನ್ನು ಉಳಿಸಿಕೊಳ್ಳಲು ಹರ ಸಹಾಸ ಪಡುವಂತಹ ಸ್ಥಿತಿ ಬಂದಿದೆ.
ಅದರಲ್ಲಿ ಬೆಸ್ಕಾಂ ಇಲಾಖೆಯು ಕೂಡ ರೈತರ ಜೊತೆ ಕಣ್ಣ ಮುಚ್ಚಲೆ ಆಟ ಆಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಬೇಜವಾಬ್ದಾರಿ ತೋರುತ್ತಿರುವುದು ವಿಪರ್ಯಾಸವಾಗಿದೆ.
ಬೆಸ್ಕಾಂ ಅಧಿಕಾರಿಗಳು ರೈತರ ಕರೆಗಳನ್ನು ಸ್ವೀಕರಿಸುವುದಿಲ್ಲ ವಿದ್ಯುತ್ ತಂತಿಯಲ್ಲಿ ಯಾವುದೇ ವ್ಯತ್ಯಾಸವಾದರೂ ಸರಿಯಾದ ಸಮಯಕ್ಕೆ ಬಾರದಿರುವುದು ತುಂಬ ಶೋಚನೀಯವಾದ ಸಂಗತಿ ಎಂದು ಬೆಸ್ಕಾಂ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.