ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ಜನತಾ ಶಿಕ್ಷಣ ಪ್ರಸಾರಕ ಸಂಘದ ಸಭಾಭವನದಲ್ಲಿ ಯೋಗಾಸನ ಭಾರತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು, ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಬೆಳಗಾವಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ವಿಕಲಚೇತನರ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಶನಿವಾರ ದಿನಾಂಕ.13/09/2025 ರಂದು ಜೆ.ಎಸ್. ಪಿ ಸಂಘದ ಆಡಳಿತಾಧಿಕಾರಿಯದಂತಹ ಅಮಿತ್ ಕರಿಕಟ್ಟಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಆರ್. ಎಚ್. ಪಾಟೀಲ ಅವರು ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಜೆ.ಎಸ್. ಪಿ ಸಂಘದ ಪ್ರೌಢಶಾಲೆಯ ಮುಖ್ಯೋಪಾಧ್ಯಂತ ಎಂ. ಎಚ್. ಕಾಮಣ್ಣವರ್, ವಿ,ಪಿ ಜೇವೂರ್ ,ಕಿವುಡ ಮತ್ತು ಮೂಕ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಶಿವಕುಮಾರ್ ಕಾಟೆ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದಂತಹ ಆರ್. ಎಚ್ ಪಾಟೀಲ್ ಮಾತನಾಡಿ ವಿಕಲಚೇತನ ಸಾಧನೆಗೆ ಯಾವತ್ತೂ ಅಡ್ಡಿಯಾಗಲಾರದು ಅದಕ್ಕೆ ಸಾಕಷ್ಟು ಪರಿಶ್ರಮ ಬೇಕು ಮತ್ತು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ವಿಕಲಚೇತನರ ಅಭಿವೃದ್ಧಿಗೆ ಸಾಕಷ್ಟು ಕ್ರೀಡಾ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ನಿರ್ಣಾಯಕ ರಾಗಿ ಅಶೋಕ ಸಂಕಣ್ಣವರ್, ರಾಘವೇಂದ್ರ ಬಂಡಿ ವಡ್ಡರ್, ಸಂಗಮೇಶ್ ಶಿಗ್ಗಾಂವಿ, ಗಂಗಾಧರ ಕುರಬಗಟ್ಟಿ, ಭಾಗವಹಿಸಿದ್ದರು.
ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಸದಸ್ಯರು ಮತ್ತು ಬೆಳಗಾವಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ಶ್ರೀಶೈಲ ಪಿ ಗೋಪಶೆಟ್ಟಿ ಸ್ವಾಗತಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ವಿಕಲಚೇತನರ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ವಂದನಾರ್ಪಣೆಯನ್ನು ಸಂಜು ಬೆಳ್ಳಿ ಕುಪ್ಪಿ ಅವರು ನೆರವೇರಿಸಿ ಕೊಟ್ಟರು.
ಈ ವೇಳೆ ಪದವಿ ಮಹಾವಿದ್ಯಾಲಯದ ಎನ್ .ಎಸ್. ಎಸ್. ಹಿರಿಯ ಸ್ವಯಂಸೇವಕರಾದ ಹನುಮಂತ ಬಿಷ್ಟಿ, ಗಣೇಶ್ ಹೊಸಟ್ಟಿ ,ಲಕ್ಷ್ಮಿ ಚುಳುಕಿ, ಅಶ್ವಿನಿ ಚಿಕ್ಕನಗೌಡರ್,ಅಂಜನಾ ಕಲ್ಯಾಣಿ, ರುಕ್ತಾನ್ ಜಕಾತಿ, ಸಾಕೀರ್ ಅನ್ಸಾರಿ,ಕಾರ್ತಿಕ್ ಮೊರಬದ ಪಾಲ್ಗೊಂಡಿದ್ದರು.