ಹಾಲಿನ ಟ್ರಕ್‌ ಹಲವು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ ಮೂವರು ಸಾವು, 20 ಮಂದಿಗೆ ಗಾಯ

WhatsApp Group Join Now

ಸಿಕ್ಕಿಂನಲ್ಲಿ ಹಲವು ಕಾರುಗಳಿಗೆ ಹಾಲಿನ ಟ್ಯಾಂಕರ್ ನ ಬ್ರೇಕ್ ಫೇಲ್‌ ಆಗಿ ಡಿಕ್ಕಿ ಹೊಡೆದ  ಪರಿಣಾಮ ಮೂವರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ ಈ ಘಟನೆ ನಡೆದಿದೆ.
ಸಿಕ್ಕಿಂನ ರಾಣಿಪೂಲ್‌ ನಲ್ಲಿ ಶನಿವಾರ ನಡೆದ ಜಾತ್ರೆಯಲ್ಲಿ ನಿಂತಿದ್ದ ಮೂರು ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಆ ಪ್ರದೇಶದಲ್ಲಿ ನೆರೆದಿದ್ದ ಅನೇಕರು ನಜ್ಜುಗುಜ್ಜಾದರು.
ಹಾಲಿನ ಟ್ಯಾಂಕರ್ ನ ಬ್ರೇಕ್ ಫೇಲ್‌ ಆಗಿರೋದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ. ಗಾಯಾಳುಗಳನ್ನು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪಘಾತದ ವೇಳೆ ಮೈದಾನ ಜನರಿಂದ ತುಂಬಿತ್ತು.

About The Author