ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ 14 ಕ್ವಿಂಟಾಲ್ ಅಧಿಕ ಅಕ್ಕಿ ವಶ.

WhatsApp Group Join Now

ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ 14 ಕ್ವಿಂಟಾಲ್ ಅಧಿಕ ಅಕ್ಕಿ ವಶ.


ಬಾಗಲಕೋಟ್ ಜಿಲ್ಲೆ ಜಮಖಂಡಿ ಪಟ್ಟಣದ ಆಜಾದ ಗಲ್ಲಿಯಲ್ಲಿ ಬೀಗ ಹಾಕಿರುವ ಮನೆಯ ಮುಂದೆ ಅಕ್ರಮ ಅಕ್ಕಿ ದಂದೆಕೋರರು 31 ಪ್ಲಾಸ್ಟಿಕ್ ಚೀಲ ತುಂಬಿರುವ ಅಕ್ಕಿಯ ಬಿಟ್ಟು ಪರಾರಿಯಾಗಿದ್ದು, 50 ಕೆಜಿ ತೂಕೂದ 5 ಚೀಲಗಳು, 45 ಕೆಜಿ.ತೂಕದ 25 ಚೀಲಗಳು, 25 ಕೆಜಿ ತೂಕದ ಒಂದು ಚೀಲ ಹೀಗೆ ಒಟ್ಟು 31 ಪಡಿತರ ಅಕ್ಕಿ ತುಂಬರುವ ಚೀಲಗಳು
14 ಕ್ವಿಂಟಾಲ್ ಇರುತ್ತದೆ ಅಂದಾಜು 21 ಸಾಸಿರ ರೂ. ಬೆಲೆಬಾಳುವ ಪಡಿತರ
ಅಕ್ಕಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುತ್ತಾರೆ


ಆಹಾರ ನಿರೀಕ್ಷಕ ಮಂಜುನಾಥ ದೊಡಮನಿ,ಆಹಾರ ಶಿರಸ್ತೆದಾರ ಸುರೇಶ ದಳವಾಯಿ, ಆಹಾರ ನಿರೀಕ್ಷಕ ಆನಂದ ರಾಠೋಡ ಹಾಗೂ ಎಎಸ್ಐ ಪಿ.ಎಸ್. ಮುರನಾಳೆ ಎಂ.ಬಿ. ಜಂಬಗಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ದಂದೆಕೋರರು ಪರಾರಿಯಾಗಿದ್ದು, ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author