ಇನ್​ಸ್ಟಾಗ್ರಾಂ ತ್ರಿಕೋನ ಪ್ರೇಮ: ಪ್ರೇಯಸಿಗಾಗಿ ಮತ್ತೋರ್ವ ಯುವಕನನ್ನು 50 ಬಾರಿ ಇರಿದು ಕೊಲೆ ಮಾಡಿದ ವ್ಯಕ್ತಿ

WhatsApp Group Join Now

ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ದೆಹಲಿಯ ಭಾಗೀರಥಿ ವಿಹಾರದಲ್ಲಿ ನಡೆದಿದೆ. ಇದಕ್ಕೆಲ್ಲಾ ತ್ರಿಕೋನ ಪ್ರೇಮವೇ ಕಾರಣ ಎನ್ನಲಾಗಿದೆ. ಒಂದೇ ಯುವತಿಯನ್ನು  ಇಬ್ಬರು ಪ್ರೀತಿಸುತ್ತಿದ್ದರು. ಮೃತರನ್ನು ಮಾಹಿರ್ ಅಲಿಯಾಸ್ ಇಮ್ರಾನ್ ಎಂದು ಗುರುತಿಸಲಾಗಿದೆ. ಹಾಗೂ ಆರೋಪಿ ಅರ್ಮಾನ್ ಖಾನ್ ಇನ್​ಸ್ಟಾಗ್ರಾಂನಲ್ಲಿ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದರು. ಇದೇ ಮಾಹಿರ್ ಕೊಲೆಗೆ ಕಾರಣವಾಯಿತು.

ದೆಹಲಿಯ ಪಹರ್‌ಗಂಜ್‌ನಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ 21 ವರ್ಷದ ಯುವತಿಯೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ್ದರು. ಇಬ್ಬರ ನಡುವಿನ ಸ್ನೇಹವು ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಅರ್ಮಾನ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

ವೀಡಿಯೊ ಕರೆಯಲ್ಲಿ ಇಬ್ಬರನ್ನು ಕಂಡು ಅರ್ಮಾನ್‌ನ ಅಸೂಯೆ ಉತ್ತುಂಗಕ್ಕೇರಿತು. ಕರೆಯಿಂದ ಕೋಪಗೊಂಡ ಆರೋಪಿ ಮಹಿಳೆಯ ಫೋನ್ ಕಿತ್ತುಕೊಂಡು, ಮಾಹಿರ್​ನನ್ನು ಭೇಟಿಯಾಗದಂತೆ ತಾಕೀತು ಹಾಕಿದ್ದ.

ಇನ್ನಿಬ್ಬರು ಆರೋಪಿಗಳಾದ ಫೈಸಲ್ (21) ಮತ್ತು ಸಮೀರ್ (19) ಜೊತೆ ಸೇರಿ ಮೂವರು ಮಾಹಿರ್ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದರು.

About The Author