WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿ ಹಿಂದುಗಡೆ ಇರುವ ಪ್ರಾಂಚ್ಯ ವಸ್ತು ಸಂಗ್ರಹಾಲಯವನ್ನು ಕಂದಾಯ ಇಲಾಖೆ ಹಾಗೂ ಪುರಸಭೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಸಂಸ್ಥಾನಿಕರ ಕಾಲದ ಜೈಲನ್ನು ಐತಿಹಾಸಿಕ ವಸ್ತು ಸಂಗ್ರಹಾಲಯ ಮಾಡಲು ಸರ್ಕಾರ ಮಾಡಿರುವ ಪ್ರಯತ್ನವು ನಿರ್ವಹಣೆ ಕೊರತೆಯಿಂದ ಕಳೆಗುಂದಿದೆ. ರಾಜ್ಯ ಸರ್ಕಾರ 2006 ರಲ್ಲಿ ಸುಮಾರು ₨ 60 ಲಕ್ಷ ವೆಚ್ಚದಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಿತು.
ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ . ಎಂ. ಜಾಮದಾರ ಅವರ ಕಲ್ಪನೆಯಂತೆ ರಾಮದುರ್ಗ ಸಂಸ್ಥಾನಿಕರ ಕುರುಹುಗಳು, ತಾಲ್ಲೂಕಿನ ಜಾನಪದ ಕಲೆಗಳ ಶೈಲಿ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿ ಸಲು ಜೈಲು ನವೀಕರಣಗೊಂಡಿದ್ದರೂ ಮಿನಿವಿಧಾನ ಸೌಧದ ಪಕ್ಕದಲ್ಲಿಯೇ ಅನಾಥವಾಗಿ ಬಿದ್ದಿತು.
ಇವಾಗ ಕಂದಾಯ ಇಲಾಖೆ ಅದನ್ನು ಗಮನಕ್ಕೆ ತೆಗೆದುಕೊಂಡು ಪುರಸಭೆ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದೆ ಇನ್ನು ಮುಂದೆಯಾದರೂ ಸುಧಾರಿಣೆ ಆಗುತ್ತಾ ಎಂದು ಕಾದು ನೋಡಬೇಕಾಗಿದೆ