ಕನ್ನಡ ನಾಮ ಫಲಕ ಶೇಕಡ 60 ರಷ್ಟು ಹಾಗೂ ಕನ್ನಡ ಹೋರಾಟಗಾರರನ್ನು ಬೇಷರತ್ತಿನ ಮೇಲೆ ಬಿಡುಗಡೆಗೊಳಿಸಿ.

WhatsApp Group Join Now

ಕರ್ನಾಟಕದಲ್ಲಿ ಎಲ್ಲಾ ಕಾರ್ಖಾನೆ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ಶೇಕಡ 60 ರಷ್ಟು ಕನ್ನಡ ನಾಮಫಲಕ ಅಳವಡಿಸಬೇಕು ಮತ್ತು ಕನ್ನಡಪರ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರ ಈ ಕೂಡಲೇ ಬೇಷರತ್ತು ಮೂಲಕ ಬಿಡುಗಡೆಗೊಳಿಸಬೇಕು. ಕಳ್ಳತನ, ಕೊಲೆ ಮಾಡಿದಂತಹ ಕಟುಕರಿಗೆ ಬೆಳಿಗ್ಗೆ ಠಾಣೆಗೆ ಕರೆದುಕೊಂಡು ಸಂಜೆ ಬಿಡುಗಡೆ ಮಾಡುತ್ತಾರೆ. ನಾಡು, ನುಡಿ, ಜಲ ಭಾಷೆಗಾಗಿ ಹೋರಾಟ ಮಾಡಿದಂತಹ ಕನ್ನಡಿಗರಿಗೆ ಜೈಲು ಶಿಕ್ಷೆ ನೀಡಿರುತ್ತೀರಿ. ಇದು ಸರಿನಾ, ಎಲ್ಲಿದೆ ನ್ಯಾಯ. ಆದ್ದರಿಂದ ಈ ಕೂಡಲೇ ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು.

ಮತ್ತು ಸರ್ಕಾರ ಆದೇಶ ಹೊರಡಿಸಿರುವ ಶೇಕಡ 60 ರಷ್ಟು ಕನ್ನಡ ನಾಮಫಲಕ ಫೆಬ್ರವರಿ 28ನೇ ದಿನಾಂಕದೊಳಗೆ ಎಲ್ಲಾ ಅಂಗಡಿ ಮತ್ತು ಕಾರ್ಖಾನೆಗಳ ಮೇಲೆ ಅಳವಡಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ತಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟು ಅಂಗಡಿ ಮತ್ತು ಕಾರ್ಖಾನೆ ಮಾಲೀಕರ ಸಭೆ ಕರೆದು, 28- ಫೆಬ್ರವರಿ-2024 ರ ಒಳಗಾಗಿ ಸರ್ಕಾರ ಆದೇಶದಂತೆ ನಡೆದುಕೊಳ್ಳದೇ ಹೋದಲ್ಲಿ ರಾಜ್ಯಾಧ್ಯಂತ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ್‌ ಕುಮಾರ್ ಶೆಟ್ಟಿ ಸಾರಿಥ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕುಗಳಲ್ಲಿ ಕನ್ನಡ ನಾಮ ಫಲಕ ಇಲ್ಲವಾದಲ್ಲಿ ಆಂಗ್ಲ ಮತ್ತು ಇತರೆ ಭಾಷೆಗಳಿಗೆ ಮಸಿ ಬಳಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ.ರ.ವೇ ಜಿಲ್ಲಾಧ್ಯಕ್ಷ ಚಂಬೆರಾಜೇಶ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಮಹಿಳಾ ಜಿ.ಅಧ್ಯಕ್ಷ ಮಂಜುಳ ನಾಗರಾಜ, ನಗರ ಅಧ್ಯಕ್ಷ ಅವಿನಾಶ್‌ ನಾರಾಯಣ್, ಯುವ ಘಟಕ ಜಿ.ಅ.ಸಂಪತ್ ಕುಮಾರ್, ಕ.ರ.ವೇ ಕಾಂತ್ರಿ ಸೇನೆ ಜಿ.ಅಧ್ಯಕ್ಷ ಮಣಿ, ಜಿಲ್ಲಾ ಸಂಚಾಲಕ ಭತ್ರಕೋಡಿಹಳ್ಳಿ ರಮೇಶ್, ಮುದುವತ್ತಿ ರಮೇಶ್, ಮಹಿಳ ಉಪಾಧ್ಯಕ್ಷ ದೀಪ, ಕುಮಾರಿ, ಮೀನ, ತಾ.ಉ.ಶ್ರೀನಿವಾಸ. ಮುಳಬಾಗಿಲು ತಾ.ಅಧ್ಯಕ್ಷ ಹರೀಶ್‌ಗೌಡ, ಗೌರವಾಧ್ಯಕ್ಷ ಪ್ರಕಾಶ್‌ಗೌಡ ಕರವೆ ಮುಖಂಡರು ಚಂಬೆ ಚಲಪತಿ, ಡಾಬಾ ರಾಮು, ಕರವ ಮುಖಂಡರುಗಳಾದ ಆಗರ ಮುನಿಸ್ವಾಮಿ, ಬೈರೆಡ್ಡಿ, ಕೃಷ್ಣಗೌಡ, ಯಲ್ಲಪ್ಪ, ಮುರಳಿ, ಮೋಹನ್ ಇನ್ನು ಮುಂತಾದವರು ಹಾಜರಿದ್ದರು.

ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)

About The Author