ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಿಂದ ಮುರುಗೋಡ ವನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕೆಂದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಮುರಗೋಡ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಕಾರ್ಮಿಕ ಪರ ದಲಿತಪರ ಹಾಗೂ ರೈತ ಪರ ಸಂಘಟನೆಗಳು ಮತ್ತು ಪರಮಪೂಜ್ಯ ನೀಲಕಂಠ ಶ್ರೀಗಳ ಹಾಗೂ ಪಟ್ಟಣದ ಗುರು ಹಿರಿಯರ ಜೊತೆಗೂಡಿ ಮುರಗೋಡ ಪಟ್ಟಣದ ಹೊಸ ನಿಲ್ದಾಣ ಹತ್ತಿರ ರಸ್ತೆ ಬಂದು ಮಾಡಿ ಮುರುಗೋಡ ವನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕೆಂದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಕಳೆದ 42 ವರ್ಷಗಳಿಂದ ತಾಲೂಕು ರಚನೆ ಹೋರಾಟ ಆರಂಭಿಸಿ ಹಲವಾರು ಬಾರಿ ಗಣ್ಯರ ನೇತೃತ್ವದಲ್ಲಿ ಮುರಗೋಡ ಹಾಗು ಸುತ್ತಮುತ್ತ ಗ್ರಾಮಗಳ ಗುರುಹಿರಿಯರ ಸಮ್ಮುಖದಲ್ಲಿ ಕಾಲ ಕಾಲಕ್ಕೆ ರಚಿತವಾದ ಆಯೋಗಗಳಿಗೆ ಮನವಿ ಕೊಡುತ್ತಾ ಬಂದರು ಇಲ್ಲಿಯವರೆಗೆ ನಮ್ಮ ಮನವಿಗೆ ಯಾವುದೇ ಸರ್ಕಾರ ಸ್ಪಂದಿಸಿಲ್ಲ ಅಷ್ಟೇ ಅಲ್ಲದೆ ಶ್ರೀ ವಾಸುದೇವ ಶ್ರೀ ಹುಂಡಿಕಾರ ಸಮಿತಿ ಮತ್ತು ಶ್ರೀ ಗದ್ದಿಗೌಡರ್ ಸಮಿತಿಗಳನ್ನು ನಾಡಿದ ತುಂಬಾ ಸಮೀಕ್ಷೆ ಮಾಡಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಆಡಳಿತವನ್ನು ಸುಗಮಗೊಳಿಸಲು ಭೌಗೋಳಿಕವಾಗಿ ಜನಸಂಖ್ಯೆ ಆಧಾರದ ಮೇಲೆ ಪಟ್ಟಣಗಳ ಶಿಫಾರಸ್ಸಿನಿಂದ ಸರ್ಕಾರಕ್ಕೆ ಬರುವ ಆದಾಯ ಮತ್ತು ಇತರೆ ಅನುಕೂಲಗಳನ್ನು ಗಣನೆಗೆ ತೆಗೆದುಕೊಂಡು ಈ ಮೇಲಿನ ಸಮಿತಿಗಳು ಮುರಗೋಡ ಪಟ್ಟಣವು ತಾಲೂಕ ಕೇಂದ್ರವಾಗಿಸಲು ಯೋಗ್ಯವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿದ್ದು

ತಾಲೂಕ ರಚನಾ ಸಮಿತಿಯ ಸದಸ್ಯರು ಕೂಡ ಶಿಫಾರಸ್ರನು ಮಾಡಿರುತ್ತಾರೆ ಮತ್ತು ಮುರಗೋಡ ಎಲ್ಲಾ ರೀತಿ ಸರ್ಕಾರಿ ಕಚೇರಿಗಳನ್ನು ಹೊಂದಿದ್ದು ಸಾಕಷ್ಟು ಭೌಗೋಳಿಕ ಕ್ಷೇತ್ರವನ್ನು ಹೊಂದಿದ್ದು ಮತ್ತು ತಾಲೂಕ ಕ್ಷೇತ್ರದಿಂದ ಸುಮಾರು 50ರಿಂದ 60 ಕೆವಿ ಅಂತರದಲ್ಲಿ ಮುರಗೋಡ್ ಕೊನೆಯ ಹಳ್ಳಿಯಾಗಿ ಇರುತ್ತದೆ ಇನ್ನಾದರೂ ಘನ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಹೊಸ ತಾಲೂಕನ್ನಾಗಿ ಮಾಡಬೇಕೆಂದು

ಉದಯ್ ಚಿಕ್ಕಣ್ಣವರ ತಾಲೂಕ ಕರವೇ ಅಧ್ಯಕ್ಷರು ಮಾತನಾಡಿದರು ಬಹು ವರ್ಷಗಳ ಬೇಡಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿಸಬೇಕೆಂದು ಎಂದು
ಪ್ರತಿ ಆರೋಗ್ಯ ಕೇಂದ್ರಕ್ಕೆ108 ಆಂಬುಲೆನ್ಸ್ ವಾಹನ ಒದಗಿಸುವ ಕುರಿತು
ಮುರಗೋಡ್ ಪಟ್ಟಣದ ಆರಕ್ಷಕ ಠಾಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವುದು ಹೌದು ನಿನ್ನಷ್ಟು ವಸತಿ ಗ್ರಹಗಳನ್ನು ನಿರ್ಮಿಸುವುದು
ಮುರಗೋಡ ಹೋಬಳಿಗೆ ಒಳಪಡುವ ಸುಮಾರು 18 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸುವುದು ಇನ್ನು ಹಲವಾರು ಬೇಡಿಕೆಗಳ ಬಗ್ಗೆ ಚರ್ಚಿಸಿ ಸವದತ್ತಿ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಈ ಒಂದು ಉಗ್ರ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಉದಯ ಚಿಕ್ಕಣ್ಣವರ್,ತಾಲೂಕ ಉಪಾಧ್ಯಕ್ಷ ಭೀಮಶಿ ಕಿವುಡಿ,ತಾಲೂಕ ಕಾರ್ಯದರ್ಶಿ ವಿನಯ್ ಪಾಸಲಕರ, ಮಹಾಂತ ಮುರಗೋಡ್, ಘಟಕದ ಅಧ್ಯಕ್ಷರಾದ ಸಂಪಗಾವ ಗಿರೀಶ್, ಆಳಾಜ ಕರೆಪ್ಪ, ಬೆಳಗಾವಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾದ ಮಹಾಂತೇಶ್ ಬಡಿಗೇರ್, ತಾಲೂಕ ಪಂಚಾಯತ್ ಸದಸ್ಯರಾದ ಸುರೇಶ್ ಮ್ಯಾಕಲ, ದೀಪಕ್ ಬಾಳಿಕಾಯಿ,
ತಾಲೂಕ ಟಿಹೆಚ್ ಶ್ರೀಪಾದ್ ಸಬನೆಸ್,
ಬೈಲಂಗಲ್ ಪಿಡಬ್ಲ್ಯೂಇಡಿ ಇಲಾಖೆಯ ಅಧಿಕಾರಿ ಹಾಲಗಿ, ಸವದತ್ತಿ ಸಿಪಿಐ ಧರ್ಮಾಕರ್ ಧರ್ಮಟ್ಟಿ,
ಮುರಗೋಡ ಉಪ ತಹಸಿಲ್ದಾರ್ ಅಲ್ಲೇನವರ್ ಮಠ, ಪಿ ಡಿ ಒ ಬಾಗಿಲದ, ಇನ್ನು ಅನೇಕರು ಇದ್ದರು

About The Author