
WhatsApp Group
Join Now
ಕೋಲಾರ : ನಗರದ ವಿಧಾನಸೌಧದ ಆವರಣವನ್ನು ಸ್ವಚ್ಛಗೊಳಿಸುವುದರಲ್ಲಿ ಕಚೇರಿಯ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ. ಕಚೇರಿಯಲ್ಲಿ ಸಾಕಷ್ಟು ಸಿಬ್ಬಂದಿ ವರ್ಗವಿದ್ದರು ಸಹ ಆವರಣದಲ್ಲಿ ಕಸದ ರಾಶಿಯು ಹೆಚ್ಚಾಗಿದೆ, ಕಸವಿರುವ ಕಡೆ ಸಾರ್ವಜನಿಕರು ಉಗುಳುವುದು ಸಹ ಹೆಚ್ಚು ಇದರಿಂದಾಗಿ ವೈರಸ್ ತರಹದ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ಕಚೇರಿಯ ಕಚೇರಿಯ ಅವಣದಲ್ಲಿ ಕಸ, ಗಲೀಜು ಇರುವುದು ಸರ್ಕಾರಕ್ಕೆ ಒಂದು ಆಗೌರವ. ಹೀಗಾಗಿ ಮಾನ್ಯ ತಹಶೀಲ್ದಾರ್ ರವರು ತಕ್ಷಣ ತಮ್ಮ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಕಚೇರಿಯ ಒಳಾಂಗಣ ಹಾಗೂ ಹೊರ ಆವರಣವನ್ನು ಸ್ವಚ್ಛಗೊಳಿಸಿ ಸುಚಿತವನ್ನು ಕಾಪಾಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಅಹಿಂದಾ ಜನಸೇವಾ ಸಮಿತಿಯ ಅಧ್ಯಕ್ಷರಾದ ಸ್ಕಂದನ್ ನವೀನ್ ಮತ್ತು ಪದಾಧಿಕಾರಿಗಳಾದ ರಘು,ಅರುಣ್, ಮುನಿರಾಜು,ರಾಜು,ಸಬಿವುಲ್ಲಾ ,ಫಿರ್ದೋಸ್ ,ಮಂಜುನಾಥ್,ಶಿವು ,ಶ್ರೀರಾಮಚಂದ್ರ , ಶರಣ್ ಕುಮಾರ್ ,ಚರಣ್ ಕುಮಾರ್ , ಶಶಿಕುಮಾರ್ ಉಪಸ್ಥಿತರಿದ್ದರು