
ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ
ಸಹಯೋಗದೊಂದಿಗೆ ಪಿಎಂಶ್ರೀ ಯೋಜನೆಯಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ
ಕಾರ್ಯಕ್ರಮವನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ| ವಿಶ್ವನಾಥಸ್ವಾಮಿ
ಆಲಮೇಲ ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ
ಶೈಕ್ಷಣಿಕ ಸಾಧನೆ ಮಾಡುವಲ್ಲಿ ಆರೋಗ್ಯವು ಬಹುಮುಖ್ಯ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ
ಪ್ರಾಥಮಿಕ ಹಂತದಲ್ಲಿಯೇ ರೋಗಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಶಾಲಾ ಹಂತದ ಆರೋಗ್ಯ
ತಪಾಸಣಾ ಶಿಬಿರಗಳು ಸಹಕಾರಿ.
ಆರೋಗ್ಯವಂತ ಮಗು ಈ ದೇಶಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುವ ಮೂಲಕ ದೇಶದ
ಅಭಿವೃದ್ಧಿಗೆ ಸಹಕಾರಿ, ಪ್ರತಿ ಮಗುವಿನ ಆರೋಗ್ಯದ ನಿರಂತರ ತಪಾಸಣೆಗಾಗಿ ಶಾಲಾ
ಹಂತದಿಂದಲೇ ಇಂತಹ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಅತ್ಯವಶ್ಯಕ ಎಂದರು.
ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವ ತಾಲೂಕಿನ ಏಕೈಕ ಶಾಲೆಯಾಗಿರುವ ಕುನ್ನಾಳದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ| ನವೀನ ನಿಜಗುಲಿ ಹಾಗೂ ಪ್ರಾಥಮಿಕ ಆರೋಗ್ಯಾಧಿಕಾರಿ
ಡಾ| ಶೌಕತ ಅಲಿ ಸಂಗಟಿ ಇವರ ಮಾರ್ಗದರ್ಶನದಲ್ಲಿ ಎಲ್ಲ ವಿದ್ಯಾರ್ಥಿಗಳ ಆರೋಗ್ಯ
ತಪಾಸಣೆಯನ್ನು ವೈದ್ಯಾಧಿಕಾರಿಗಳಾದ ಡಾ| ವಿಜಯಲಕ್ಷ್ಮೀ ಕೋಣಿ, ಡಾ. ರವಿಕಾಂತ ಬಸರಕೋಡ,
ಶುಶೂಷ್‌ಣಾಧಿಕಾರಿ ಸಂಕಮ್ಮ ಮುರಡಿ, ಪದ್ಮಾವತಿ ಮುದ್ದಿ, ಹುಲಕುಂದ ಆರೋಗ್ಯ
ನಿರೀಕ್ಷಣಾಧಿಕಾರಿ ರಾಜು ಅಂಗಡಿ, ಆರೋಗ್ಯ ಸಂರಕ್ಷಣಾಧಿಕಾರಿ ಸುರೇಖಾ ಬಾಳೆದಾರ ಹಾಗೂ
ಆಶಾ ಕಾರ್ಯಕರ್ತೆ ಸವಿತಾ ಗುಡಗುಡಿ ನಡೆಸಿ ಅಗತ್ಯ ವೈದ್ಯಕೀಯ ಮಾರ್ಗದರ್ಶನ
ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ಹಾಲೊಳ್ಳಿ, ಎಸ್.ಡಿ.ಎಮ್.ಸಿ. ಸದಸ್ಯರಾದ
ಹಣಮಂತ ಗಾಣಿಗೇರ, ಶ್ರೀಕಾಂತ ಮಕ್ಕಳಗೇರಿ, ಶಿಕ್ಷಕರಾದ ಎಸ್.ಎ. ಕಳ್ಳಿ, ವಿ.ಆರ್. ಅಣ್ಣಿಗೇರಿ,
ಕೆ.ಬಿ. ಮಾಳಪ್ಪನವರ, ಶಿಕ್ಷಕಿಯರಾದ ಭಾರತಿ ಸಿದ್ರಾಳ, ಸವಿತಾ ಮಳಲಿ, ಅನ್ನಪೂರ್ಣ
ಉಪಸ್ಥಿತರಿದ್ದರು.