ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಮದುರ್ಗ ತಾಲೂಕ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಸ್ಲಿಮರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಕ್ಪ್ ನೂತನ ತಿದ್ದುಪಡಿ ಕಾಯ್ದೆಯನ್ನು ಮರಳಿ ಪಡೆಯಬೇಕು ಎಂದು ಘೊಷಣೆ ಕೂಗುತ್ತ ಪಟ್ಟಣದ ಹರಳಯ್ಯ ವೃತ್ತದಿಂದ ನೇರವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳು ಭಾರತ ಸರಕಾರ ಮನವಿ ಸಲ್ಲಿಸಿದರು.
ಈ ದೇಶದ ಎಲ್ಲ ಜನರಿಗೆ ಅವರು ಬಯಸುವ ಧರ್ಮವನ್ನು ಆಚರಿಸುವ ಹಾಗೂ ಆಚರಸದೇ ಇರುವ ಹಕ್ಕುಗಳನ್ನು ಸಂವಿಧಾನ ನೀಡುತ್ತದೆ. ಆರ್ಟಿಕಲ್ 26ರ ಪ್ರಕಾರ ಈ ದೇಶದ ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕನ್ನಾಗಿ ಖಾತ್ರಿಪಡಿಸುತ್ತಿದೆ ಎಂದು ಮೌಲಾನಾ ಇಮಾಮಹುಸೇನ ಅವರು ಕೇಂದ್ರ ಸರಕಾರದ ವಕ್ಫ ಕಾಯ್ದೆ 2025 ತಿದ್ದುಪಡಿ ವಿರೋಧಿಸಿ ರಾಮದುರ್ಗ ತಾಲೂಕ ಸಂವಿಧಾನ ಸಂರಕ್ಷಣಾ ಸಮಿತಿ ಹಮ್ಮಿಕೊಂಡ ವಕ್ಫ ತಿದ್ದುಪಡಿ ವಾಪಸ್ ಆಗಬೇಕು ಎಂದು ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇವತ್ತು ಸುಳ್ಳುಗಳನ್ನು ಹೇಳಿ ಆರ್ಟಿಕಲ್ 26ನ್ನು ಉಲ್ಲಂಘನೆ ಮಾಡಿ ವಕ್ಫ ತಿದ್ದುಪಡಿ ಮಾಡಿರುವುದು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಬಿ.ಆರ್.ದೊಡಮನಿ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ ನ ಈ ಹಿಂದಿನ ಕಾಯಿದೆಯಲ್ಲಿ ಹಿರಿಯರು ತಮ್ಮ ಆಸ್ತಿಗಳನ್ನು ದಾನವಾಗಿ ದೇವರ ಹೆಸರಲ್ಲಿ ಕೊಟ್ಟಿದ್ದು ಇದೆ. ಈಗಲೂ ಆ ಕಾಯಿದೆ ಇದೆ. ಆದರೆ ಈಗಿನ ಕೇಂದ್ರ ಸರಕಾರ ತಿದ್ದುಪಡಿ ಮಾಡಿ ವಕ್ಫ ಕಮಿಟಿಗೆ ದಾನಮಾಡುವ ವ್ಯಕ್ತಿ ಕಡ್ಡಾಯವಾಗಿ ನಿರಂತರ 5 ವರ್ಷದವರೆಗೆ ಇಸ್ಲಾಮಿಕ್ ನಿಯಮಗಳನ್ನು ಪಾಲಿಸಿರಬೇಕು ಎಂದು ತಿದ್ದುಪಡಿ ಮಾಡಿದ್ದು ಖಂಡನೀಯ ಎಂದು ಸಿ.ಐ.ಟಿ.ಯು ನ ಮುಖಂಡ ಜಿ.ಎಮ್.ಜೈನೆಖಾನ್, ಜನಪರ ಟ್ರಸ್ಟ್ ಅಧ್ಯಕ್ಷ ಸುಭಾಸ ಘೋಡಕೆ, ಝಹೂರ ಹಾಜಿ, ಹಾಲುಮತದ ಸಮಾಜದ ಮುಖಂಡರಾದ ಪಡಿಯಪ್ಪ ಬ್ದಾರಿ, ನಿಂಗಪ್ಪ ಕರಿಗಾರ, ಅಂಜುಮನ್ ಇಸ್ಲಾಂ ಕಮಿಟಿಯ ಮಹಮ್ಮದಶಫಿ ಬೆಣ್ಣೆ, ಜಮಿಯತ್ ಉಲಮಾ ಮುಖಂಡ ಇಸ್ಮಾಯಿಲ್ ಮಕಾನದಾರ, ಮೌಲಾನಾ ನೋರಹ್ಮದ್ , ರಡ್ಡಿ ಸಮಾಜದ ಜ್ಞಾನೇಶ್ವರ ಮೇಲಪ್ಪಗೋಳ, ಮಾರಾಠಾ ಸಮಾಜದ ರಾಜು ಮಾಣೆ. ಪಂಚಮಸಾಲಿ ಮುಖಂಡರಾದ ಪರ್ವತಗೌಡ ಪಾಟೀಲ, ಅಂಜುಮನ್ ಕಮಿಟಿಯ ಬಸೀರಹ್ನದ ರೋಣ ಮುಂತಾದವರು ಮಾತನಾಡಿದರು.
ಸಭೆಯಲ್ಲಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ, ಎಪಿಜೆ ಅಬ್ದುಲ್ ಕಲಾಂ ಸಂಘಟನೆಯ, ಕಾರ್ಮಿಕ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಮುದಾಯ ಘಟಕ, ರಡ್ಡಿ ಸಮಾಜ ಹೀಗೆ ಹಲವಾರು ಸಮಾಜದ ಮುಖಂಡರು ಭಾಗವಹಿಸಿದ್ದರು.