ಕೊಟ್ಟೂರು:ಚೆಕ್ ಡ್ಯ‍ಾಂ ಕಾಮಗಾರಿ ಕಳಪೆ, ತನಿಖೆ ಮಾಡಿ-ಇಒಗೆ ರೈತ ಮುಖಂಡ ಒತ್ತಾಯ

WhatsApp Group Join Now

ವಿಜಯನಗರ ಜಿಲ್ಲೆ ಕೊಟ್ಟೂರು:ತಾಲೂಕಿನ ನಾಗರಕಟ್ಟೆ ಹಾಗೂ ಕೆಐನಹಳ್ಳಿ ವ್ಯಾಪ್ತಿಯ, ಹಳ್ಳಗಳ ಬದುವಿನಲ್ಲಿ ಕೃಷಿ ಚೆಕ್ ಡ್ಯಾಂ ನಿರ್ಮಾಣದಲ್ಲಿ. ಭಾರೀ ಅವ್ಯವಹಾರ ನಡೆದಿದೆ ತನಿಖೆ ಮಾಡಿ ಎಂದು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೋಡಿಹಳ್ಳಿ ಭರ್ಮಣ್ಣ ದೂರಿದ್ದಾರೆ. ಹಳೇ ಚೆಕ್ ಡ್ಯಾಂನ ಕಲ್ಲುಗಳನ್ನೇ ಬಳಸಲಾಗಿದೆ, ಪಕ್ಕದಲ್ಲಿನ ಹಳ್ಳವನ್ನೆ ಅಗೆದು ಬಗೆದು. ಕನಿಷ್ಠ ದರ್ಜೆಯ ಮರಳನ್ನು ಹಾಗೂ ಕಡಿಮೆ ದರ್ಜೆಯ ಸಾಮಾಗ್ರಿಗಳನ್ನು ಬಳಸಲಾಗಿದ್ದು, ಈ ಚೆಕ್ ಡ್ಯಾಂಗಳನ್ನು ಅವೈಜ್ಞಾನಿಕ ರೀತಿಯಲ್ಲಿ ತುಂಬಾ ದುರ್ಭಲರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಂಬಂಧಿಸಿದಂತೆ ಅವರು ತಮ್ಮ ಇತರೆ ಹೋರಾಟಗಾರರೊಂದಿಗೆ, ಡಿ18ರಂದು ಕೊಟ್ಟೂರು ತಾಲೂಕು ಪಂಚಾಯ್ತಿ, ಕಾರ್ಯನಿರ್ವಹಣಾಧಿಕಾರಿಗೆ ದೂರನ್ನು ನೀಡಿದ್ದಾರೆ. ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ, ಹಾಗೂ ನಾಗರಕಟ್ಟೆ ಗ್ರಾಮಗಳಲ್ಲಿ. ಕೃಷಿ ಇಲಾಖೆಯ ಕೂಡ್ಲಿಗಿ ಉಪನಿರ್ಧೇಶಕರ ಸಹಯೋಗದೊಂದಿಗೆ, ಕೃಷಿ ಇಲಾಖೆಯ ಕೊಟ್ಟೂರು ಉಪನಿರ್ಧೇಶಕರು. ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳು, ಸಂಪೂರ್ಣ ಕಳಪೆಯಿಂದಯಿಂದ ಕೂಡಿವೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ತಾವು ಖುದ್ದು ಚೆಕ್ ಡ್ಯಾಂ ಗಳನ್ನು ಪರಿಶೀಲಿಸಿದ್ದು ಕಾಮಗಾರಿಯ ವಾಸ್ತವ ಸ್ಥಿತಿ ನನಗೆ ಅರಿವಿದೆ. ನಿಯಮಗಳನ್ನು ಪಾಲಿಸಿಲ್ಲ, ದಾಖಲೆಗಳಲ್ಲಿ ದಾಖಲಿಸಲಾಗಿರುವ ಯೋಜನಾ ವೆಚ್ಚದಲ್ಲಿ. ಶೇ 50ರಷ್ಟು ಹಣವನ್ನು ಕೂಡ ವ್ಯಯ ಮಾಡಿಲ್ಲ, ಕೇವಲ 2ಲಕ್ಷಕ್ಕಿಂತ ಕಡಿಮೆ ರೂ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆಯಷ್ಟೇ. ಆದರೆ ಯೋಜನಾ ವೆಚ್ಚದ ಪಟ್ಟಿಯಲ್ಲಿ ಒಂದು ಚೆಕ್ ಡ್ಯಾಂ ಗೆ, ತಲಾ 5ಲಕ್ಷ ರೂ ಯೋಜನಾ ವೆಚ್ಚ ತೋರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಚೆಕ್ ಡ್ಯಾಂ ನಿರ್ಮಾಣ ಪೂರಾ ಅವೈಜ್ಞಾನಿಕವಾಗಿದ್ದು, ಇಲಾಖೆಯ ಯಾವ ನಿಯಮಗಳನ್ನು ಪಾಲಿಸಿಲ್ಲ ಸಂಪೂರ್ಣ ಗಾಳಿಗೆ ತೂರಲಾಗಿದೆ. ಇವರು ನಿರ್ಮಾಣ ಮಾಡಿರುವ ಚೆಕ್ ಡ್ಯಾಂಗಳು, ಸಂಪೂರ್ಣ ಕಳಪೆಯುತವಾಗಿವೆ ಕಾರಣ ಪರಿಶೀಲಿಸಬೇಕೆಂದು ಕೊಟ್ಟೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ದೂರಿದ್ದಾರೆ. ಶೀಘ್ರವೇ ದೂರಿಗೆ ಸ್ಪಂಧಿಸಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಲೋಪ ವ್ಯಸಗಿರುವ ಅಧಿಕಾರಿಗಳ ವಿರುದ್ಧ. ಕಾನುನು ರೀತ್ಯ ಶಿಸ್ತು ಕ್ರಮ ಜರುಗಿಸಬೇಕೆಂದು, ಭರ್ಮಣ್ಣ ಹಕ್ಕೊತ್ತಾಯ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಕೊಟ್ಟೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ, ವಾರದೊಳಗಾಗಿ ಅಗತ್ಯ ಕ್ರಮ ಜರುಗಿಸದಿದ್ದಲ್ಲಿ. ಕಳಪೆ ಕಾಮಗಾರಿ ಹಾಗೂ ಜರುಗಿರುವ ಅವ್ಯವಹಾರದ ಕುರಿತು, ಅಗತ್ಯ ತನಿಖೆಗೆ ಒತ್ತಾಯಿಸಿ ಕಾನೂನು ರೀತ್ಯ ಹೋರಾಟ ಮಾಡಲಾಗುವುದು. ಲೋಕಾಯುಕ್ತರಲ್ಲಿ ಹಾಗೂ ಎಸಿಬಿಯಲ್ಲಿ ದೂರು ದಾಖಲಿಸಲಾಗುವುದು, ಮತ್ತು ಇಲಾಖೆಯ ಮಂತ್ರಿಗಳಿಗೆ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಸಿ. ಪ್ರಕರಣದ ಸೂಕ್ತ ತನಿಖೆಯಾಗುವವರೆಗೂ, ಕಾನೂನು ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ದಲಿತ ಮುಖಂಡರಾದ, ಬಿ.ಪರಶುರಾಮ, ಕೆ.ಹೆಚ್.ವೀರಭದ್ರಪ್ಪ ಸೇರಿದಂತೆ. ಕೊಟ್ಟೂರು ಪಟ್ಟಣ ಸೇರಿಸಂತೆ, ಕೊಟ್ಟೂರು ತಾಲೂಕಿನ ವಿವಿದೆಡೆಯ ರೈತ ಮುಖಂಡರಿದ್ದರು. ಭಾರೀ ಮೊತ್ತದ ಅವ್ಯವಹಾರ.!?ಶಂಕೆ.. ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕು, ವ್ಯಾಪ್ತಿಯಲ್ಲಿ ಒಟ್ಟು 30 ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಲ್ಲಿಸಿದ್ದು ಅನುಮೋದನೆ ದೊರಕಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ. ಅದರಂತೆ ಎರೆಡೂ ತಾಲೂಕುಗಳಿಗೆ ಸೇರಿದಂತೆ, ಒಟ್ಟು 30 ಚೆಕ್ ಡ್ಯಾಂ ಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರಕಿದೆ ಎನ್ನಲಾಗಿದೆ. ಒಂದು ಚೆಕ್ ಡ್ಯಾಂ ಗೆ ತಲಾ 5ಲಕ್ಷ ರೂ ವೆಚ್ಚದ, ಕ್ರಿಯಾ ಯೋಜನೆ ರೂಪಿಸಿ ವಿವರ ತೋರಿಸಿದ್ದು. ಅದರಂತೆ ಒಟ್ಟು 30 ಚೆಕ್ ಡ್ಯಾಂಗಳಿಗೆ , ಒಟ್ಟು ಹಣ 1 ಕೊಟಿ 50 ಲಕ್ಷರೂಗಳ ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂಬ ಮಾಹಿತಿ ಇದೆ. ಆದರೆ ಸ್ಥಳೀಯರು ಹಾಗೂ ರೈತರು ರೈತ ಹೋರಾಟಗಾರರು, ನೀಡಿದ ಕಾಮಗಾರಿ ವಿವರ ವಾಸ್ತಾವಾಂಶ ಅರಿತಾಗ. ಒಂದು ಚೆಕ್ ಡ್ಯಾಂಗೆ ಕೇವಲ, 1ಲಕ್ಷ75ಸಾವಿರ ರೂ ಕರ್ಚಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಶಂಕೆಯಾಗಿದ್ದು ಲೋಕಾಯುಕ್ತರ ತನಿಖೆಯ ನಂತರವಷ್ಟೇ, ಹಗರಣದ ನಿಜಾಂಶ ಹೊರಬರಲಿದೆ.

About The Author