ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕಗದಾಳದಲ್ಲಿ 2025-26 ನೇ ಸಾಲಿನ ಹುಲಿಕಟ್ಟಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕ್ರೀಡಾಕೂಟವನ್ನು ಶಾಸಕ ವಿಶ್ವಾಸ ವಸಂತ ವೈದ್ಯ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗಳು ಧೈರ್ಯ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವುದರ ಜೊತೆಗೆ ಯುವಕರಲ್ಲಿ ಧೈರ್ಯ ಮತ್ತು ಸಾಹಸದಂತಹ ಗುಣಗಳನ್ನು ವೃದ್ಧಿಸುತ್ತವೆ. ಅದಕ್ಕಾಗಿ ಕ್ರೀಡೆಗಳನ್ನು ಒಳ್ಳೆಯ ಹವ್ಯಾಸಗಳನ್ನಾಗಿ ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಕಗಧಾಳದ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಕರೆನೀಡಿದರು.
ಕ್ರೀಡಾ ಧ್ವಜವನ್ನು ನೆರವೇರಿಸಿ ಮಾತನಾಡಿದ ಮಾಜಿ ಶಾಸಕರಾದ ಆರ್ ವ್ಹಿ ಪಾಟೀಲ್ ರವರು ಕ್ರೀಡೆಗಳನ್ನು ಸ್ಪರ್ಧಾತ್ಮಕವಾಗಿ ಆಡಲು ಮತ್ತು ಯಾವುದೇ ಗಲಾಟೆಗಳಾಗದಂತೆ ನೋಡಿಕೊಳ್ಳಲು ತಿಳಿಸಿದರು.ಅಲ್ಲದೇ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿರುವುದನ್ನು ನೋಡಿ ಪ್ರಶಂಸಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣರಡ್ಡಿ ಸವದತ್ತಿರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯ ಮೇಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶಂಕ್ರಮ್ಮ ಹಳಕಟ್ಟಿ, ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ, ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಸವರಾಜ ಕುಂಬಾರ, ಉಪಾಧ್ಯಕ್ಷರಾದ ಫಕೀರಪ್ಪ ಅಪನಾಯ್ಕರ್. ಗ್ರಾಮ ಪಂಚಾಯಿತಿ ಸದಸ್ಯರಾದ ಎಮ್ ವಾಯ್ ರಾಯನಗೌಡ್ರ,ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಯಲರಡ್ಡಿ ವೆಂ ಹುಚರಡ್ಡಿ, ಪಿ ಎನ್ ಕೌಜಲಗಿ, ಶ್ರೀಮತಿ ಕೆ ಆರ್ ನದಾಫ,ಎಸ್ ಎಸ್ ವಾಗೇರಿ,ಎಮ್ ಎನ್ ಕರಡಿಗುಡ್ಡ ,ಎಸ್ ಎಮ್ ಕುಂಬಾರ ,ಸಂತೋಷ ನಿಂಗರಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ದೈಹಿಕ ಶಿಕ್ಷಕರಾದ ಡಿ ಬಿ ಕೊಡ್ಲಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ಎಸ್ ವ್ಹಿ ಶೆಟ್ಟರ್ ವಂದಿಸಿದರು.