ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿಪ್ರ ವಿದ್ಯಾ ಸಂಸ್ಥೆಯ ಶ್ರೀಮತಿ ರುಕ್ಮಿಣಿಬಾಯಿ ಮಾಳದಕರ ಜ್ಞಾನ ಪ್ರಬೋಧಿನಿ ವಿದ್ಯಾಲಯ ತುರನೂರ-ರಾಮದುರ್ಗದಲ್ಲಿ ಶ್ರೀ ವೆಂಕಣ್ಣ ಕರಗುಪ್ಪಿಕರ ದತ್ತಿ ನಿಧಿ ಪ್ರಬಂಧ ಸ್ಪರ್ಧೆ ಹಾಗೂ ಖ್ಯಾತ ನ್ಯಾಯವಾದಿಗಳಾದ ಎಸ್.ಎಂ. ಕುಲಕರ್ಣಿ ಅವರಿಗೆ 2024ರ ಜೀವಮಾನ ಸಾಧನೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಪ್ರ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ವಿ.ಎನ್. ಗೋಡಖಿಂಡಿ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಶ್ರೀ ಶಿರೀಷ್ ಜೋಶಿ, ನೀರಜಾ ಗಣಾಚಾರಿ ಆಗಮಿಸಿ, ಶಿಕ್ಷಕ ವೃತ್ತಿಯ ಮಹತ್ವ ಹಾಗೂ ಗುರುತರ ಜವಾಬ್ಧಾರಿಯ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಆಪ್ಟೆ, ಸಂಸ್ಥೆಯ ಕಾರ್ಯದರ್ಶಿ ಕಾರ್ಯದರ್ಶಿ ಗೋಪಾಲಕೃಷ್ಣ ಬಿಂದಗಿ, ಕೋಶಾಧ್ಯಕ್ಷ ವಿ.ಎಸ್. ಜೋಶಿ, ಸುರೇಶ ಕುಂಬಾರ, ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವಿ. ಕುಲಕರ್ಣಿ, ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಪ್ರಸಾದ ಕುಲಕರ್ಣಿ ಸೇರಿದಂತೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ವೆಂಕಣ್ಣ ಕರಗುಪ್ಪಿಕರ ದತ್ತಿ ನಿಧಿ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡ 27 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪಡೆದುಕೊಂಡರು. ಪ್ರಧಾನಗುರು ಮಾತೆ ಎಸ್.ವಿ. ನೌಡಗೌಡರ ಸ್ವಾಗತಿಸಿದರು. ಶಕುಂತಲಾ ಚಿಕ್ಕಮಠ ಕಾರ್ಯಕ್ರಮ ನಿರೂಪಿಸಿದರು. ಶೃತಿ ಬಡಿಗೇರ ವಂದಿಸಿದರು.
ಖ್ಯಾತ ನ್ಯಾಯವಾದಿಗಳಾದ ಎಸ್.ಎಂ.ಕುಲಕರ್ಣಿ ಅವರಿಗೆ 2024ರ ಜೀವಮಾನ ಸಾಧನೆ ಪ್ರಶಸ್ತಿ ವಿತರಿಸಲಾಯಿತು.

WhatsApp Group
Join Now