New Delhi: ದೇಶದೆಲ್ಲೆಡೆ 75ನೇಗಣರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕರ್ನಾಟದಲ್ಲಿಯೂ ಭಾರೀ ಸಂಭ್ರಮ ಮನೆಮಾಡಿದೆ. ಇಂದು ಬೆಳಗ್ಗೆ 8 ಗಂಟೆಗೆ ನವದೆಹಲಿಯಲ್ಲಿ ರಾಷ್ಟ್ರಪತಿಗಳಾದ ದೌಪದಿ ಮುರ್ಮು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಈ ವರ್ಷದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಿದ್ದಾರೆ.
‘ವೀಕ್ಷಿತ್ ಭಾರತ್’ ಮತ್ತು ‘ಲೋಕತಂತ್ರ ಕಿ ಮಾತೃಕಾ’ ಥೀಮ್‌ನಡಿ ಈ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವ 2024ರ ಮೆರವಣಿಗೆಯು ವಿಜಯ್ ಚೌಕ್‌ನಿಂದ ಕರ್ತವ್ಯ ಪಥ್‌ಗೆ ಹೋಗುವ ಮಾರ್ಗವನ್ನು ಅನುಸರಿಸಿ, ನವದೆಹಲಿಯ ವಿಜಯ್ ಚೌಕ್‌ನಿಂದ ಬೆಳಗ್ಗೆ 10:30ಕ್ಕೆ ಪ್ರಾರಂಭವಾಗುತ್ತದೆ. ಇದು ರಾಷ್ಟ್ರಪತಿ ಭವನದಲ್ಲಿ ಆರಂಭವಾಗಿ ರಾಜಪಥದವರೆಗೆ ಸಾಗಲಿದೆ.
ಇದನ್ನು ಓದಿ:ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಶೆಟರ್ ಹಾಕಿ ಬಿಜೆಪಿಗೆ ವಾಪಸ್ ಆಗಿದ್ಯಾಕೆ?
ಈ ಸ್ಥಳದಲ್ಲಿ ವೀಕ್ಷಣೆಗೆಂದು ಸರಿಸುಮಾರು 77,000 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, 42,000 ಸಾರ್ವಜನಿಕರಿಗೆ ಕಾಯ್ದಿರಿಸಲಾಗಿದೆ. ದೇಶವು ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿದೆ. ಇದು ಪರಿವರ್ತನೆಯ ಸಮಯ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶವನ್ನು ನೀಡಲಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ,(ಏಜೆನ್ಸಿಸ್).