ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನಧಿಕೃತ ಮೊರಂ ಗಣಿಗಾರಿಕೆ ಮಾಡಿದ 2 ಟಿಪ್ಪರ್, 3 ಟ್ರ್ಯಾಕ್ಟರ್ ಜಪ್ತಿ

WhatsApp Group Join Now

ಧಾರವಾಡ ತಾಲೂಕಿನ ಸಲಕಿನಕೊಪ್ಪ ಹದ್ದಿನ ಸಣ್ಣ ಸೋಮಾಪುರ ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಇಲ್ಲದೆ ಮೊರಂ ಗಣಿಗಾರಿಕೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ಇಂದು ಸಂಜೆ ದಾಳಿ ನಡೆಸಲಾಯಿತು.

ಈ ವೇಳೆ ನಾಗೇಶ ಅಣ್ಣಿಗೇರಿ ಹಾಗೂ ಪವನಗೌಡ ಹೊಸೂರ ಎಂಬುವರು ಇಲಾಖೆಯ ಅನುಮತಿ ಇಲ್ಲದೆ ಮೊರಂ ಅಗೆದು ಸಾಗಾಟ ಮಾಡಿರುವುದು ಕಂಡುಬಂದಿತ್ತು. ಮೊರಂ ಸಾಗಿಸಲು ಬಳಸುತ್ತಿದ್ದ 2 ಟಿಪ್ಪರ್ ಹಾಗೂ 3 ಟ್ರ್ಯಾಕ್ಟರ್‍ಗಳನ್ನು ಜಪ್ತಿ ಮಾಡಿ ಗ್ರಾಮೀಣ ಪೆÇಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಮತ್ತು ಈ ಕುರಿತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

About The Author