
WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಬಳಿ
ಶುಕ್ರವಾರ ನಸುಕಿನ ಜಾವದಲ್ಲಿ ಹೊಲಕ್ಕೆ ಜೋಳ ಕೀಳಲು ಚಕ್ಕಡಿಯಲ್ಲಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಬೋಲೊರೊ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಚಕ್ಕಡಿ ಮುರಿದು ಎರಡು ಎತ್ತುಗಳಿಗೆ ಗಾಯವಾಗಿದೆ
ವಾಹನ ಬಾಗಲಕೋಟ ಕಡೆಯಿಂದ ಬೆಳಗಾವಿಗೆ ಹೋಗುತ್ತಿದ್ದು ಚಕ್ಕಡಿ ಸಾಲಹಳ್ಳಿಯಿಂದ ಹೊಲಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ ಬಾಗಲಕೋಟ – ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಚಕ್ಕಡಿಯ ಮೇಲೆ ಪಿಕಪ್ ವಾಹನ ಹರಿದು ಸ್ಥಳದಲ್ಲಿಯೇ ರೈತರ ಮಹಿಳೆ ಮೃತಪಟ್ಟಿದ್ದು ನಾಲ್ವರು ರೈತರು ತೀವ್ರ ಗಾಯಗೊಂಡಿದ್ದಾರೆ.
ಯಮನವ್ವ ಮಾಯಪ್ಪ ಮಡ್ಡಿ (42)ಮೃತ ಮಹಿಳೆ. ಸುರೇಶ್ ಮಾಯಪ್ಪ ಮಡ್ಡಿ,ಅಡಿವಪ್ಪ ಬರಮಪ್ಪ ಜೀರಗಾಳ, ಮಂಜುಳಾ ಅಡಿವೆಪ್ಪ ಜೀರಗಾಳ, ಶಿವಕ್ಕ ಬರಮಪ್ಪ ಜೀರಗಾಳ ಗಾಯಗೊಂಡ ರೈತರು. ಘಟನಾ ಸ್ಥಳಕ್ಕೆ ಕಟಕೋಳ ಪೋಲಿಸರು ಆಗಮಿಸಿ ಈ ಪ್ರಕರಣ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ