ಚಿಲಮೂರ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿ ರಚನೆ

WhatsApp Group Join Now

ಚಿಲಮೂರ ಗ್ರಾಮದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನೂತನವಾಗಿ ಶಾಲಾ ಸುಧಾರಣಾ ಸಮಿತಿಯನ್ನು ಚೀಟಿ ಎತ್ತುವ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಹತ್ತು ಜನ ಪುರುಷ ಸದಸ್ಯರು ಎಂಟು ಜನ ಮಹಿಳಾ ಸದಸ್ಯರು ಆಯ್ಕೆ ಮಾಡುವ ಕಾರ್ಯಕ್ರಮವು ನಡೆದಿದ್ದು,

ಸದಸ್ಯರನ್ನು ಆಯ್ಕೆಮಾಡಿಕೊಂಡು, ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀ ಫಕೀರಪ್ಪ ಯಮನಪ್ಪ ದಳವಾಯಿ, ಉಪಾಧ್ಯಕ್ಷರನ್ನಾಗಿ ಶ್ರೀಮತಿ ಫಕೀರವ ಭೀಮಪ್ಪ ರೊಟ್ಟಿ, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲಾ ಮುಖ್ಯ ಗುರುಗಳು ಗ್ರಾಮಸ್ಥರು ಗುರು ಹಿರಿಯರು ಶಾಲಾ ಸುಧಾರಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು

About The Author