ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಿಸಿಯೂಟ ನೌಕರರ ಬೇಡಿಕೆ.

WhatsApp Group Join Now

ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಿಸಿಯೂಟ ನೌಕರರ ಬೇಡಿಕೆಗಳ ಮನವಿ ಪತ್ರ ಮಾನ್ಯ ಸಿದ್ದರಾಮಯ್ಯನವರಿಗೆ ಪ್ರಜಾ ಸೇವಾ ಸಮಿತಿ ಸಂಯೋಜಿತ ಅಕ್ಷರ ದಾಸೋಹ ಕ್ಷೇಮಾಭಿವೃದ್ಧಿ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ ಶಿವಣ್ಣ ಅವರ ನೇತೃತ್ವದ ಸಂಘಟನೆ ಮುಖಂಡರುಗಳ ನೇತೃತ್ವದಲ್ಲಿ ಕೊಡಲಾಯಿತು ಇಡೀ ಕರ್ನಾಟಕ ರಾಜ್ಯಾದ್ಯಂತ ಇರುವ ಒಂದು ಲಕ್ಷ ಹದಿನೆಂಟು ಸಾವಿರ ಅಕ್ಷರ ದಾಸೋಹ ನೌಕರರ ಬೇಡಿಕೆಗಳು ಈಡೇರಿಸಬೇಕೆಂದು ಹಾಗೂ ನೌಕರರ 6ನೇ ಗ್ಯಾರೆಂಟಿ ಜಾರಿ ಮಾಡಬೇಕೆಂದು ಒತ್ತಾಯಿಸಲಾಯಿತು ಮಾಸಿಕ 10500 ವೇತನ ನೀಡಬೇಕು ನೌಕರರ ಕಾಯಂ ಗೊಳಿಸಬೇಕು ನೌಕರರ ಆರೋಗ್ಯ ವಿಮೆ ಮಾಡಿಸಬೇಕು ಏನೇ ಹೆಚ್ಚು ಕಡಿಮೆಯಾದರು ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಬದುಕಬೇಕು ಬಿಸಿಯೂಟ ನೌಕರರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಹೆಚ್ಚು ಖರ್ಚಾಗುತ್ತಿದ್ದು ಅದರ ವೆಚ್ಚವನ್ನು ಸರ್ಕಾರವೇ ಬರಿಸಿ ಉಚಿತ ವಿದ್ಯಾಭ್ಯಾಸ ಕೊಡಬೇಕು. ಕೆಲವು ಬಿಸಿಯೂಟ ನೌಕರರಿಗೆ ಸ್ವಂತ ಮನೆ ಇಲ್ಲ ಮನೆ ಕಟ್ಟಿಕೊಳ್ಳಲು ಐದು ಲಕ್ಷ ಹಣವನ್ನು ವಿಶೇಷ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಬೇಕು ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರಿ ನೌಕರರ ಮಕ್ಕಳನ್ನ ಸರ್ಕಾರಿ ಶಾಲೆಗಳಲ್ಲಿ ಓದಿಸುವ ಕಾನೂನನ್ನು ಸರಕಾರ ಜಾರಿ ಮಾಡಬೇಕು ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬೇಕು ಬಡವರ ಮಕ್ಕಳು ಶ್ರೀಮಂತರ ಮಕ್ಕಳು ಒಂದೇ ಶಾಲೆಯಲ್ಲಿ ಓದುವ ಕಾನೂನನ್ನು ಜಾರಿ ಮಾಡಿ ಎಂದು ಒತ್ತಾಯಿಸಿ ಇನ್ನು ಹಲವು ಬೇಡಿಕೆಗಳ ಮನವಿ ಪತ್ರವನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ವಿಧಾನಸೌಧ ಮುಂಭಾಗ ಕೊಡಲಾಯಿತು.. ನಮ್ಮ ಹೋರಾಟ ನಮ್ಮ ಹಕ್ಕು ನಮ್ಮ ಹಕ್ಕುಗಳಿಗಾಗಿ ಈಡೇರಿಕೆಗಾಗಿ ಸದಾ ಹೋರಾಟವೇ ನಮ್ಮ ಅಸ್ತ್ರ ಬಿಸಿಯೂಟ ನೌಕರರ ಹೋರಾಟಕ್ಕೆ ಜಯವಾಗಲಿ… ಮನವಿ ಕೊಡುವ ನೇತೃತ್ವವನ್ನು ವಹಿಸಿದ್ದ ಬಿಸಿಊಟ ಮುಖಂಡರುಗಳಾದ ಕೋಡಿಹಳ್ಳಿ ಜ್ಯೋತಿ ಮಾಸ್ತಿ ಲಕ್ಷ್ಮಮ್ಮ ಅನಿತಾ ಬಾಯಿ ತೋರಣ ಹಳ್ಳಿ ಲಕ್ಷ್ಮಿ ಭಾಗ್ಯಮ್ಮ ತಾಳುಕುಂಟೆ ಪದ್ಮಮ್ಮ ಕೋರಂಡಹಳ್ಳಿ ಶೋಬಮ್ಮ.. ಬೆಂಬಲಿಸಿ ರೈತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ. ಜಿ ನಾರಾಯಣಸ್ವಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ನೇತೃತ್ವ ವಹಿಸಿದ್ದ

About The Author