ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಸಂಚಾರ ಆರೋಗ್ಯ ಘಟಕಕ್ಕೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now

ಧಾರವಾಡ : ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಚಾರ ಆರೋಗ್ಯ ಘಟಕಕ್ಕೆ ವಿವಿಧ ಹುದ್ದೆಗಳಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು (2), ಶುಶ್ರೂಷಕರು (2), ಪ್ರಯೋಗ ಶಾಲಾ ತಂತ್ರಜ್ಞರು (2), ಒಟ್ಟು 6 ಹುದ್ದೆಗಳ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸೆಪ್ಟೆಂಬರ 10, 2025 ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 3 ಘಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಭವನದಲ್ಲಿ ಅರ್ಜಿ ಸಲ್ಲಿಸಬಹುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಎನ್.ಹೆಚ್.ಎಮ್ ನಿಯಮಾನುಸಾರ ಮೂಲ ದಾಖಲಾತಿಗಳನ್ನು ಪರೀಶಿಲನೆ ಸಮಯದಲ್ಲಿ ಹಾಜರುಪಡಿಸಬೇಕು. ತದನಂತರ ಬಂದ ಅರ್ಜಿಗಳನ್ನು ಆಯ್ಕೆಯಲ್ಲಿ ಪರಿಗಣಿಸುವುದಿಲ್ಲ ಮತ್ತು ಸದರಿ ಆಯ್ಕೆ ಪ್ರಕ್ರೀಯೆಯಲ್ಲಿನ ಹುದ್ದೆಗಳನ್ನು ಹೆಚ್ಚಿಸುವ ಮತ್ತು ಕಡಿತಗೊಳಿಸುವ ಅಧಿಕಾರವನ್ನು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸೊಸೈಟಿ ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಎನ್‍ಎಚ್‍ಎಮ್ ವಿಭಾಗದಲ್ಲಿ ಸಂಪರ್ಕಿಸಬಹುದು ಮತ್ತು ಈ ಕುರಿತ ಮಾಹಿತಿಯನ್ನು ಕಚೇರಿಯ ಸೂಚನಾಫಲಕದಲ್ಲಿ ಪ್ರದರ್ಶಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


About The Author