ಡಾಕ್ಟರೇಟ್ ಪಡೆದ ಬಾಪೂಗೌಡ ಸಂಕನಗೌಡ್ರು ಇವರಿಗೆ ವೀರಶೈವ ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನ ಮಾಡಲಾಯಿತು

WhatsApp Group Join Now

ರಾಮದುರ್ಗ ಪಟ್ಟಣದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ತಾಲೂಕ ಕಚೇರಿಯಲ್ಲಿ ಡಾಕ್ಟರೇಟ್ ಪಡೆದ ಬಾಪೂಗೌಡ ಸಂಕನಗೌಡ್ರು ಇವರಿಗೆ ವೀರಶೈವ ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆ ತಾಲೂಕ ಅಧ್ಯಕ್ಷ ರಾಜೇಶ್ ಬೀಳಗಿ ಮಾತನಾಡಿದ ಅವರು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿಶ್ವವಿದ್ಯಾಲಯ ಹೊಸ ದೆಹಲಿಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದು ಸಂತೋಷ ತಂದಿದೆ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಬಾಪೂಗೌಡ ಸಂಕನಗೌಡ್ರ ಇವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ. ಪುನೀತ್ ಫೌಂಡೇಶನ್ ವತಿಯಿಂದ ಹಾಗೂ ಮಹರ್ಷಿ ಪತಂಜಲಿ ಅವತಿಂದ ಹಲವಾರು ಯೋಗಾಸನ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣೆ ಹೀಗೆ ಇನ್ನು ಹಲವಾರು ಸಮಾಜ ಸೇವೆಯನ್ನು ಮಾಡಿಕೊಂಡು ತಮ್ಮದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿರುತ್ತಾರೆ ಇವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಬಸವರಾಜ್ ಕೋಣನ್ನವರ ಮಾತನಾಡಿದ ಅವರು ಪತಂಜಲಿ ಶಿಬಿರದ ಅಧ್ಯಕ್ಷರು ಹಾಗೂ ವೀರಶೈವ ಲಿಂಗಾಯತ ಸಂಘಟನೆಯ ಉಪಾಧ್ಯಕ್ಷರಾಗಿರುವ ಬಾಪೂಗೌಡ ಸಂಕನಗೌಡ್ರ ಇವರಿಗೆ ಇವರ ಒಂದು ಸಮಾಜ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿಶ್ವವಿದ್ಯಾಲಯ ಹೊಸ ದೆಹಲಿಯಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿರುತ್ತಾರೆ ಇವರ ಒಂದು ಸಮಾಜ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ನಮಗೆಲ್ಲ ಸಂತೋಷದ ವಿಷಯವಾಗಿದೆ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶ್ರೀ ಗಂಗಾಧರಯ್ಯ ಹಿರೇಮಠ್,ರಾಜ್ಯ ಕಾರ್ಯದರ್ಶಿ ಮಹೇಶ ದೊಡ್ಡಮನಿ, ಯಮನಪ್ಪ ಬಾರ್ಕಿ, ಪ್ರಶಾಂತ್ ಅಂಗಡಿ ಉಪಸ್ಥಿತರಿದ್ದರು

About The Author