ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

WhatsApp Group Join Now

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ. ರವರು ಸಸಿ ನೆಟ್ಟು ಅದಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಿಮ್ಹಾನ್ಸ್ ನ ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವೇಂದ್ರ ನಾಯಕ್, ಶುಶ್ರೂಷಕ ಅಧಿಕ್ಷಕರಾದ ಗಾಯತ್ರಿ ಶಿಂಧೆ, ಮನೋವೈದ್ಯರು ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಮಂಜುನಾಥ ಭಜಂತ್ರಿ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಸಿಬ್ಬಂದಿಗಳಾದ ಅಶೋಕ ಕೋರಿ, ಆರ್.ಎಮ್.ತಿಮ್ಮಾಪೂರ, ಅನಂತರಾಮು ಬಿ.ಜಿ, ನಸಿರ್ಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸುನಂದಾ ಜಿ.ಟಿ, ಡಾ.ಶ್ರೀಧರ ಕುಲಕರ್ಣಿ, ವೈದ್ಯಾಧಿಕಾರಿಗಳಾದ ಡಾ.ವಾಯ್.ಎಲ್.ಕಲಕುಟಕರ್, ಶುಶ್ರೂಷಕ ಅಧಿಕಾರಿಗಳು, ಡಿಮ್ಹಾನ್ಸ್ ಸಂಸ್ಥೆಯ ಇತರ ವಿಭಾಗದ ಸಿಬ್ಬಂದಿಗಳು, ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು, ಎಂ.ಫೀಲ್ ವಿದ್ಯಾರ್ಥಿಗಳು, ಎಸ್.ವಿ.ವಾಯ್.ಎಮ್‍ಸಂಸ್ಥೆಯ ಡಾ.ಮೋಹನಕುಮಾರ ಥಂಬದ ಹಾಗೂ ಇತರರು ಭಾಗವಹಿಸಿದ್ದರು.
ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು.

About The Author