ಧಾರವಾಡದ ಎನ್‍ಸಿಸಿ ಬಟಾಲಿಯನ್‍ನಿಂದ ಏಕತಾ ಓಟ, ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

WhatsApp Group Join Now

ಧಾರವಾಡ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 24 ಕರ್ನಾಟಕ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಅನೂಪ್ ರಾಷಲ್ ಗಾಂವಕರ, 5 ಗಲ್ರ್ಸ್ ಬಟಾಲಿಯನ್ ಲೆಫ್ಟನೆಂಟ್ ಕರ್ನಲ್ ಸುಜನ ರಾಯ್, ಎಓ ಲೆಫ್ಟನೆಂಟ್ ಕರ್ನಲ್ ವೈ.ಎಸ್.ರನಾವತ್ ಇವರುಗಳ ನೇತೃತ್ವದಲ್ಲಿ ಏಕತಾ ಓಟ, ಸ್ವಚ್ಛತಾ ಅಭಿಯಾನ ಮತ್ತು ಪುನೀತ್ ಸಾಗರ್ ಅಭಿಯಾನ ಜರುಗಿತು.

ಕೆಲಗೇರಿ ಕೆರೆ ಮತ್ತು ಕೆಸಿಡಿ ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಎನ್‍ಸಿಸಿ ಕೆಡೆಟ್‍ಗಳ ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಒಗ್ಗಟ್ಟು ಪ್ರದರ್ಶಿಸುವದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಜಾಗೃತಿ ಮೂಡಿಸುವದು. ಸ್ವಚ್ಛತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏಕತಾ ಓಟ ಜರುಗಿತು.

ಏಕತಾ ಓಟ ಕೆಲಗೇರಿ ಕೆರೆಯಿಂದ ಸಾಯಿ ಮಂದಿರ, ದಾಸನಕೊಪ್ಪ ವೃತ್ತ, ಆಕಾಶವಾಣಿ ವೃತ್ತ, ಕೆಸಿಡಿ ವೃತ್ತ, ಕೆಸಿಡಿ ಕಾಲೇಜು ಮೈದಾನ ತಲುಪಿತು. ಧಾರವಾಡದ ಕರ್ನಾಟಕ ವಿಜ್ಞಾನ, ಕಲಾ ಮಹಾವಿದ್ಯಾಲಯ, ಕಿಟೆಲ್ ಕಾಲೇಜು, ಅಗ್ರಿ ಕಾಲೇಜು, ವಿದ್ಯಾರಣ್ಯ ಪಿಯು ಕಾಲೇಜು, ಸೆಂಟ್ ಜೋಸೆಪ್ ಹೈಸ್ಕೂಲ್, ಜೆಎಸ್‍ಎಸ್ ಸ್ಕೂಲ್, ಕೆಇ ಬೋರ್ಡ್ ಹೈಸ್ಕೂಲ್, ಯುಪಿಎಸ್ ಸ್ಕೂಲ್, ಆರ್‍ಎಲ್‍ಎಸ್ ಹೈಸ್ಕೂಲ್, ಕರ್ನಾಟಕ ಹೈಸ್ಕೂಲ್, ವಿದ್ಯಾರಣ್ಯ ಹೈಸ್ಕೂಲ್, ಕೆಎಲ್‍ಇ ಹೈಸ್ಕೂಲ್, ಕೆಎನ್‍ಕೆ ಹೈಸ್ಕೂಲ್, ಪ್ರಜೆಂಟೇಶನ್ ಹೈಸ್ಕೂಲ್, ಜೆಎಸ್‍ಎಸ್ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಎನ್‍ಸಿಸಿ ಕೆಡೆಟ್‍ಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಕಾಲೇಜಿನಲ್ಲಿ ಕ್ಯಾಪ್ಟನ್ ಎಂ.ಜಿ.ಹಿರೇಮಠ ಅವರಿಂದ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ, ಕ್ಯಾಪ್ಟನ್ ರಾಘವೇಂದ್ರ ಭಟ್, ಲೆಫ್ಟಿನೆಂಟ್ ಸಂತೋಷ್ ಜಿಪಿ ಅವರಿಂದ ರಾಷ್ಟ್ರ ನಿರ್ಮಾಣದಲ್ಲಿ ಎನ್‍ಸಿಸಿಯ ಪಾತ್ರ, ಕ್ಯಾಪ್ಟನ್ ವೈಎಸ್ ರಾವುತ್ ಅವರಿಂದ ಸ್ವಚ್ಛ ಭಾರತ ಅಭಿಯಾನದ ಮಹತ್ವದ ಬಗ್ಗೆ ಉಪನ್ಯಾಸ ಜರುಗಿತು.

ಈ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಎ.ಎಂ.ಖಾನ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಡಾ.ಎಂ.ಎಚ್.ಮುಲ್ಲಾ, ಕ್ಯಾಪ್ಟನ್ ಮಹೇಶ ಕುರುಬರ, ಕೇರ್ ಟೇಕರ್ ಡಾ. ಸಮೀರ ಛಬ್ಬಿ, ಪ್ರಾಂಶುಪಾಲರಾದ ಡಾ.ಶ್ರೀಮತಿ ಎಂ.ಎಸ್.ಸಾಳುಂಕೆ, ಡಾ.ಆಯ್.ಸಿ.ಮುಳಗುಂದ, ಎಲ್ಲಾ ಕಾಲೇಜು ಹಾಗೂ ಹೈಸ್ಕೂಲಿನ ಎನ್‍ಸಿಸಿ ಕೆಡೆಟ್ ಹಾಗೂ ಅಧಿಕಾರಿಗಳು ಸೇರಿದಂತೆ ಸುಮಾರು ಏಳು ನೂರು ಎನ್‍ಸಿಸಿ ಕೆಡೆಟ್‍ಗಳು ಭಾಗವಹಿಸಿದ್ದರು.

About The Author