
ಬೆಳಗಾವಿ: ಪತ್ರಕರ್ತರ ಸೋಗಿನಲ್ಲಿ 40 ಕೆಜಿ ಶ್ರೀಗಂಧ ಕಳ್ಳ
ಸಾಗಾಟಕ್ಕೆ ಮಾಡುತ್ತಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಈ ಘಟನೆ ನಡೆದಿದ್ದು,
ನಿಖರ ಮಾಹಿತಿ ಮೇರೆಗೆ ಹುಕ್ಕೇರಿ ಅರಣ್ಯ ಇಲಾಖೆ ಅಧಿಕಾರಿಗಳು
ಕಾರ್ಯಾಚರಣೆ ನಡೆಸಿ, 40 ಕೆಜಿ ಶ್ರೀಗಂಧ ಕಳ್ಳ ಸಾಗಾಟಕ್ಕೆ
ಮಾಡುತ್ತಿದ್ದ ಕಾರ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಕಾರ್ ನಲ್ಲಿದ್ದ ಆರೋಪಿಗಳು ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕಾರ ಮೇಲೆ ಮಿಡಿಯಾ ಎಂದು ಬರೆಸಿ ಸ್ಮಗ್ಲಿಂಗ್ ಮಾಡುತಿದ್ದ ಖತರನಾಕ್ ಗ್ಯಾಂಗ್ ಇದಾಗಿದೆ. ಅರಣ್ಯಾಧಿಕಾರಿ ಪ್ರಸನ್ನ
ಬೆಲ್ಲದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾ
ಚರಣೆಯಲ್ಲಿ ಶ್ರೀಗಂಧ ಕಳ್ಳ ಸಾಗಾಟ ಮಾಡುತ್ತಿದ್ದ ನಕಲಿ
ಪತ್ರಕರ್ತರು ಪರಾರಿ ಪರಸಪ್ಪ ಭಜಂತ್ರಿ ಎಂಬುವರಿಗೆ ಸೇರಿದ
ಕಾರಿನಲ್ಲಿ ಪುಂಡಲಿಕ ಭಜಂತ್ರಿ ಎಂಬುಬರ ನಕಲಿ ಯೂ ಟ್ಯೂಬ್
ಐಡಿ ಪತ್ತೆಯಾಗಿದ್ದು, ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು
ಬಲೆ ಬೀಸಿದ್ದಾರೆ.
ಬೆಳಗಾವಿಯಲ್ಲಿ ನಕಲಿ ಯೂ ಟ್ಯೂಬ್ ವರದಿಗಾರರ ಹಾವಳಿ
ಹೆಚ್ಚಾಗುತ್ತಿದೆ. ನಕಲಿ ಯೂ ಟ್ಯೂಬ್ ವರದಿಗಾರರ ಹಾವಳಿಗೆ
ಅಧಿಕಾರಿಗಳು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ನಕಲಿ
ಪತ್ರಕರ್ತರ ಹಾವಳಿಯಿಂದ ನಿಜವಾದ ಪತ್ರಕರ್ತರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಬಹುತೇಕ ವಾಹನಗಳ ಮೇಲೆ ಮಿಡಿಯಾ ಎನ್ನುವ ಫಲಕ ಅಳವಡಿಕೆ ಮಾಡಲಾಗುತ್ತಿದೆ.
ನಕಲಿ ಪತ್ರಕರ್ತರ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರ
ಆಗ್ರಹಿಸಿದ್ದಾರೆ.