ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳಪೆ ಮಟ್ಟದ ಕಾಮಗಾರಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ರಿಪೇರಿ ವಾಟರ್ ಪ್ರೂಫಿಂಗ್ ಮತ್ತು ಕ್ಯಾಟಲ್ ಟ್ರಾಪ್ ನಿರ್ವಹಣೆ ಎಂದು 2022-2023ನೇ ಸಾಲಿನ ತಾಲೂಕ ಪಂಚಾಯತ್ ಅನಿರ್ಬಂಧಿತ ಅನುದಾನದ ಅಡಿಯಲ್ಲಿ494893 ರೂಪಾಯಿ ಅನುದಾನವನ್ನು ಗುತ್ತಿಗೆದಾರರಾದ ಪಿ ಎಸ್ ಬನ್ನೂರ್ ಅವರು ಕಾಮಗಾರಿ ಮಾಡಿದ್ದು ಸಂಪೂರ್ಣ ಕಳೆಪೆ ಆಗಿದ್ದು ಇರುತ್ತದೆ.

ಇವರು ನಿರ್ಮಾಣ ಮಾಡಿದ ಕ್ಯಾಟಲ್ ಟ್ರಾಪ್ ಸಂಪೂರ್ಣ ಕಳಪೆ ಮಟ್ಟದಲ್ಲಿದ್ದು ಪ್ರಾಥಮಿಕ ಕೇಂದ್ರಕ್ಕೆ ಬರುವ ರೋಗಿಗಳಿಗೆ ತುಂಬಾ ತೊಂದರೆಯಾಗಿದೆ.

ಕ್ಯಾಟಲ್ ಟ್ರಾಪ್ ಮೇಲೆ ಸೈಕಲ್ ಮೋಟಾರ್ ಸವಾರರು ಸಾಕಷ್ಟು ಬಾರಿ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಗೇಟ್ ರಿಪೇರಿ ಹಳೇ ಗೇಟಿಗೆ ಬಣ್ಣವನ್ನು ಹಚ್ಚಿ ಅದನ್ನು ಸರಿಯಾಗಿ ಜೋಡಣೆ ಮಾಡದೆ ಹಾಗೆ ಬಿಟ್ಟಿರುತ್ತಾರೆ ಸಂಪೂರ್ಣ ಕೆಲಸ ಮಾಡದೆ ಇರುವುದು ಬೇಸರದ ಸಂಗತಿ ಯಾಗಿದೆ ಇನ್ನು ಮುಂದೆ ಆದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ರಾಮದುರ್ಗ ಹಾಗೂ ಕಾರ್ಯನಿರ್ವಾಹಕ ಅಭಿಯಂತಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಬೆಳಗಾವಿ ಇವರು ಎಚ್ಚೆತ್ತಿಕೊಂಡು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಕಳಪೆ ಮಟ್ಟದ ಕಾಮಗಾರಿಯನ್ನು
ಸರಿಪಡಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ