WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯೆ ಬೈಕ್ ಸವಾರ ಡಿವೈಡರಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ.
ಹಿರೋ ಸ್ಟೆಂಡರ ಪ್ಲಸ್ ಮೋಟಾರ ಸೈಕಲ್ಲ kA69 J2167 ನೇದ್ದರ ವಾಹನದಲ್ಲಿ ಇಬ್ಬರು ಕೂಡಿಕೊಂಡು ಲೋಕಾಪೂರದಿಂದ ಬಟಕುರ್ಕಿ ಕಡೆಗೆ ಹೋಗುವಾಗ ರಸ್ತೆ ಮದ್ಯೆ ಇರುವ ಡೈವಡರಗೆ ಹಾಯಿಸಿ ಕೆಳಗೆ ಬಿದ್ದು ತನ್ನ ತಲೆಗೆ.ಗದ್ದಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ, ಭಾರಿಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ರವಿ ನಿಂಗಪ್ಪ ಬೂದಿ ವಯಾ: 29 ವರ್ಷ ಸಾ:ಆನೆಗುದ್ದಿ ಈತನು ಸ್ಥಳದಲ್ಲೇ ಸಾವನ್ನಪ್ಪಿದಾನೆ ಹಾಗೂ ಅವನ ಸ್ನೇಹಿತ
ಸಂಜು ಬಸಪ್ಪ ಚಂದರಗಿ ವಯಾ: 23 ವರ್ಷ ಸಾ:ಆನೆಗುದ್ದಿ ಈತನ ತಲೆಗೆ ಗಾಯಗೊಂಡಿದ್ದು ಈತನನ್ನು ರಾಮದುರ್ಗ ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ ಭೇಟಿ ನೀಡಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.