ಬಾದಾಮಿ: ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಬಾಗಲಕೋಟೆ ಜಿಲ್ಲಾ ಪಂಚಾಯತ ನ ಮಾಜಿ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ ಬಾದಾಮಿ ಬನಶಂಕರಿ ದೇವಿ ಜಾತ್ರೆಗೆ ಬರುವ ಮಹಿಳಾ ಭಕ್ತಾದಿಗಳಿಗೆ ಅರಿಶಿನ-ಕುಂಕುಮ ವಿತರಣೆ ಕಾರ್ಯಕ್ರಮ ಜರುಗಿತು.
ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ ನವಶಕ್ತಿ ದೇವತೆಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು.
ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ ಬಾದಾಮಿ ಬನಶಂಕರಿ ದೇವಿ ರಾಥೋತ್ಸವ ವಿಜೃಂಭನೆಯಿಂದ ಜರುಗುವುದು.
ಜಾತ್ರೆಗೆ ಬರುವ ಮಹಿಳಾ ಭಕ್ತಾದಿಗಳಿಗೆ ದೇವಸ್ಥಾನದ ಪ್ರಾಂಗಣದಲ್ಲಿಯೇ ಮಹಿಳೆಯರಿಗೆ ಹಸಿರು ಬಳೆ, ಅರಿಶಿನ-ಕುಂಕುಮ, ಹೂವು ನೀಡಿ ನೂರಾರು ಸುಮಂಗಳೆಯರ ಆಶೀರ್ವಾದ ಪಡೆದರು. ಅರಿಶಿನ ಕುಂಕುಮ ಪಡೆದ ನೂರಾರು ಮಹಿಳಾ ಭಕ್ತರು ಶ್ರೀಮತಿ ವೀಣಾ ಕಾಶಪ್ಪನವರ ಅವರ ದೈವೀ ಕಾರ್ಯಕ್ಕೆ ಮೆಚ್ಚಿ ಅವರಿಗೆ ಕುಂಕುಮ ಅರಿಶಿನ ಹಚ್ಚಿ ಆಶೀರ್ವದಿಸಿ ಸಂತುಷ್ಟರಾಗಿ ಹೋಗುತ್ತಿದ್ದರು.
ಇದೇ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ ನ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಡಿ. ಯಾಲಿಗಾರ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅನುರಾಧ ಆನಂದ ದೊಡಮನಿ, ಯುವ ಮುಖಂಡ ಆನಂದ್ ದೊಡಮನಿ ಸೇರಿದಂತೆ ಇನ್ನೂ ಅನೇಕ ಮಹಿಳಾ ಮುಖಂಡರು ಹಾಗೂ ಕಾಂಗ್ರೆಸ್ ನ ಕಾರ್ಯಕರ್ತರು ಉಪಸ್ಥಿರಿದ್ದರು.
