ಬೆಟಗೇರಿ ಗ್ರಾಮದಲ್ಲಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ದ್ವಿಚಕ್ರ ವಾಹನಗಳು ನಾಶ

WhatsApp Group Join Now

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಳೆದ ಸುಮಾರು ನಾಲ್ಕೆöದು ದಿನಗಳಿಂದ ಹಗಲು-ರಾತ್ರಿ ಸುಮಾರು ಗಂಟೆಗಳ ಕಾಲ ಆಗಾಗ ಮಳೆ ಜೋರಾಗಿ ಸುರಿಯುತ್ತಿದ್ದು, ಗುರುವಾರ ರಾತ್ರಿ ಸುರಿದ ಮಳೆಗೆ ಬೆಟಗೇರಿ ಗ್ರಾಮದ ಮನೆಯೊಂದರ ಗೋಡೆ ಪಕ್ಕದಲ್ಲಿ ನಿಲ್ಲಿಸಿದ ಎರಡು-ಮೂರು ದ್ವಿಚಕ್ರ ವಾಹನಗಳ ಮೇಲೆ ಮನೆಯ ಗೋಡೆ ಕುಸಿದು ನಾಶಗೊಂಡಿವೆ.
ಮನೆ ಗೋಡೆಯ ಕಲ್ಲು ಮಣ್ಣು ದ್ವಿಚಕ್ರ ವಾಹನಗಳ ಮೇಲೆ ಬಿದ್ದು ದ್ವಿಚಕ್ರ ವಾಹನಗಳು ನಾಶವಾಗಿವೆ. ಹೀಗಾಗಿ ಗ್ರಾಮದ ಓಣಿ ರಸ್ತೆ ಮೇಲೆ ಮಕ್ಕಳು, ಸ್ಥಳೀಯರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಸುಮಾರು ನಾಲ್ಕೆöದು ದಿನದಿಂದ ಹಗಲು ಇಲ್ಲವೇ ರಾತ್ರಿ ಹೊತ್ತು ಆಗಾಗ ಮಳೆ ಸುರಿದು ಬೆಟಗೇರಿ ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಗೋವಿನಜೋಳ ಸೇರಿದಂತೆ ಭೂಮಿಯಲ್ಲಿದ್ದ ಕೆಲವು ಬೆಳೆಗಳು ನೆಲಕಚ್ಚಿ ಈಗಾಗಲೇ ನಾಶವಾಗಿ ಹೋಗುತ್ತಿವೆ. ಹೀಗೆ ಕೆಲವು ದಿನ ಮಳೆ ಮುಂದುವರಿದರೆ ಅಳಿಉಳಿದ ಇನ್ನೂ ಕೆಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.

About The Author