ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಸರ್ವೇಪಲ್ಲಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು.

WhatsApp Group Join Now

ಸ್ವಾಮಿ ವಿವೇಕಾನಂದರು ಜಗತ್ತಿಗೆ ಧರ್ಮ ಮತ್ತು ಯೋಗವನ್ನು ಪರಿಚಯಿಸಿದರೆ, ಅವರಿಂದ ಪ್ರೇರಿತರಾದ ಸರ್ವೇಪಲ್ಲಿ ಡಾ. ರಾಧಾಕೃಷ್ಣನ್ ಅವರು ತಮ್ಮ ಚಿಂತನೆ ಮೂಲಕ ಜಗತ್ತಿಗೆ ಜ್ಞಾನ, ತತ್ವಜ್ಞಾನದ ಪರಂಪರೆಯನ್ನು ಪರಿಚಯಿಸಿದವರು ಎಂದು ಹಿರಿಯ ಶರಣ ಸಾಹಿತಿ ಪ್ರೊ| ಸಿದ್ದಣ್ಣ ಲಂಗೋಟಿ ಹೇಳಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ನೇತೃತ್ವದಲ್ಲಿ ಗುರುವಾರ ಸಂಜೆ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಧಾಕೃಷ್ಣರ ಜ್ಞಾನ ಪರಂಪರೆಯ ಪ್ರತೀಕವಾದ ಶಿಕ್ಷಕರು ಮಕ್ಕಳಿಗೆ ಜಾತಿ, ಮತ ಪಂಥಗಳ ತತ್ವ ಬೇಧದ ವಿಷಬೀಜ ಬಿತ್ತದೆ, ಸರ್ವರಲ್ಲಿ ಸಮಾನತೆ, ಭ್ರಾತತ್ವ ಸಾರುವ ಸಂದೇಶಗಳನ್ನು ತಿಳಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕಾಗಿದೆ. ತಾಯಿಯ ಉದರದಲ್ಲಿ ಮಾನವ ಪ್ರಥಮ ಜನ್ಮ ತಾಳಿದರೆ, ಶಾಲೆಯ ಶಿಕ್ಷಕರ ಅನುಭಾವದ ಜ್ಞಾನದಲ್ಲಿ ಎರಡನೇ ಜನ್ಮ ತಾಳಿ ಜಗತ್ತಿಗೆ ಪ್ರಕಾಶಿಸುತ್ತಾನೆ ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ, ಸಮಾಜದಲ್ಲಿ ಜಾಗೃತಿಯಿಂದ ಮುನ್ನಡೆಯಬೇಕಾದ ಅಗತ್ಯತೆ ಶಿಕ್ಷಕರ ಮೇಲಿದ್ದು, ವಿದ್ಯಾರ್ಥಿಗಳನ್ನು ಗೌರವದಿಂದ ಕಾಣುವ ಪರಿಪಾಠವನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ಈ ದಿಶೆಯಲ್ಲಿ ಶಿಕ್ಷಕರು ತಮ್ಮ ವೃತ್ತಿ ಪ್ರವೃತ್ತಿಯನ್ನು ಚೆನ್ನಾಗಿ ಮುಂದುವರೆಸಿಕೊAಡು ಹೋಗಬೇಕೆಂದು ಹೇಳಿದರು.
ಸಿ.ಎಸ್. ಬೆಂಬಳಗಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ತೆಗ್ಗಿಹಳ್ಳಿ ಮಾತನಾಡಿ, ಆರ್ಥಿಕ ವ್ಯವಹಾರದ ಜೊತೆಗೆ ಸಮಾಜಮುಖಿ ಚಿಂತನೆಗೆ ಸಮಯ ಮಿಸಲಿಟ್ಟ ಬ್ಯಾಂಕ್ ಅಫ್ ಬರೋಡಾ ಶಾಖೆಯ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ನಿಜಗುಲಿ, ಕಾರ್ಯದರ್ಶಿ ಎಸ್.ವಿ. ಪಾಟೀಲ, ಶಿಕ್ಷಕರಾದ ಸುರೇಶ ಏಣಿ, ಎ.ವಿ. ಪಾಟೀಲ, ಅಪ್ಪಣ್ಣ ವರಗನ್ನವರ, ಕೆ.ಎನ್. ಯಡ್ರಾವಿ, ಪ್ರಾ. ಎಂ.ಬಿ. ಪಾಟೀಲ, ಕೆ.ವೈ. ಗದಿಗೆನ್ನವರ, ಎಸ್.ಎಚ್. ಪ್ರಭಾಕರ, ಶಿವಾನಂದ ಜಾಮದಾರ, ಮಾರುತಿ ಜಂಗವಾಡ, ಆರ್.ಎಂ. ಪಾಟೀಲ, ಆರ್.ವೈ. ನದಾಫ್, ಗೀತಾ ಕೋತಿನತೋಟ ಅವರನ್ನು ಗೌರವಿಸಲಾಯಿತು.
ನಿವೃತ್ತ ಉಪನ್ಯಾಸಕ ಆರ್.ಎಂ. ಪಾಟೀಲ, ಪ್ರೊ. ಕಲ್ಯಾಣಮ್ಮ ಲಂಗೋಟಿ, ಬ್ಯಾಂಕ್ ಸಿಬ್ಬಂದಿಗಳಾದ ವುಡಿಮುಡಿ ಶಿವಕುಮಾರ, ಮಧು ಕಲಾಲ, ಪೃಥ್ವಿ ಮೇಲಮ್, ರಾಜೇಶ್ವರಿ ಮ್ಯಾಗೇರಿ, ವೀರಪ್ಪ ಹಲಗಿ ಸೇರಿದಂತೆ ಇತರರಿದ್ದರು.
ಬ್ಯಾಂಕ್ ಆಫ್ ಬರೋಡಾ ಶಾಖಾ ವ್ಯವಸ್ಥಾಪಕ ಹನಮಂತ್ರಾಯ ಬಿರಾದಾರ ಸ್ವಾಗತಿಸಿ, ವಂದಿಸಿದರು.

About The Author