ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಭಾಗ್ಯ ನಗರದಲ್ಲಿ 1 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಂತ ಹಂತವಾಗಿ ಸರಕಾರದಿಂದ ಅನುದಾನ ಮಂಜೂರಾದ ತಕ್ಷಣ ಎಲ್ಲಾ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುವದು. ಸರಕಾರದಿಂದ ದೊರೆತ ಅನುದಾನ ಸದ್ಭಳಕೆಯಾಗಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನತೆ ಗುತ್ತಿಗೆದಾರರಿಗೆ ಸಹಕಾರ ನೀಡಿ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಮುಖಂಡರಾದ ಪ್ರದೀಪ ಪಟ್ಟಣ, ಅನಿಕೇತ ಪಟ್ಟಣ, ಇಮಾಮಸಾಬ ಬೇಪಾರಿ, ಸದಸ್ಯರಾದ ಫಕ್ರುಸಾಬ ಬೇಪಾರಿ, ಗುತ್ತಿಗೆದಾರರಾದ ಪೀರು ತಳವಾರ, ಪುರಸಭೆ ಸದಸ್ಯರಾದ ಶಂಕರ ಸೂಳಿಭಾವಿ, ಪುರಸಭೆ ಮಾಜಿ ಅಧ್ಯಕ್ಷ ಭಾಷಾ ಮೊರಬ, ಮಾಜಿ ಜಿ.ಪಂ ಸದಸ್ಯ ಜಹೂರ ಹಾಜಿ, ಶೇಖರ ಸಿದ್ಲಿಂಗಪ್ಪನವರ, ಇಮಾಮ ಕಲಾದಗಿ, ದುರಗಪ್ಪ ಬಂಡಿವಡ್ಡರ, ಬಾಬು ಉದ್ದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.