ಪಹಣಿ ಪತ್ರಿಕೆಯಲ್ಲಿ ಬಹು ಮಾಲೀಕತ್ವ, ವಿಭಿನ್ನ ಶುಲ್ಕ ನಿಗದಿಯಂತಹ ತಾಂತ್ರಿಕ ತೊಡಕು నివారిసి, ಭೂದಾಖಲೀಕರಣ ಸುಸೂತ್ರಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜತೆಗೆ ಭೂಮಾಲೀಕರ ಮೇಲಿನ ಅರ್ಜಿ ಶುಲ್ಕದ ಹೊರೆಯನ್ನೂ ಇಳಿಸಿದೆ.
ಅರ್ಜಿ ಶುಲ್ಕ ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಪೋಡಿಮುಕ್ತ ಗ್ರಾಮದ ಉದ್ದೇಶ ಈಡೇರುವುದಿಲ್ಲ, ಪಹಣಿಯಲ್ಲಿನ ಬಹು ಮಾಲೀಕತ್ವ ಸರ್ಕಾರದ ಇನ್ನುಳಿದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತೊಂದರೆಯಾಗಲಿದೆ ಶಾಸಕರು ಗಮನಸೆಳೆದಿದ್ದರು. ಎಂದು ಅಲಿನೇಷನ್ ಪೂರ್ವ ನಕ್ಷೆ, 11ಇ ಸ್ಕೆಚ್. ತತ್ಕಾಲ್ ಪೋಡಿ, ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕ ತಗ್ಗಿಸಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಒತ್ತಡ ಹೇರಿದ್ದರು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಾಸ್ತವ ಸ್ಥಿತಿ ಅವಲೋಕಿಸಿ ಸೇವಾ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ನಂತರದ

ಜ.1 ನಂತರದ ಅರ್ಜಿಗಳಿಗೆ ಅನ್ವಯ:
ಮೋಜಿಣಿ ವ್ಯವಸ್ಥೆಯಡಿ ಸಲ್ಲಿಕೆಯಾಗುವ ಅರ್ಜಿಗಳ ಶುಲ್ಕದ ಹೊರೆ ಇಳಿಸಿದೆ. ಆದರೆ, ಈಗಾಗಲೇ ಸ್ವೀಕೃತವಾಗಿ ವಿಲೇವಾರಿಗೆ ಬಾಕಿಯಿರುವ ಅರ್ಜಿಗಳಿಗೆ ಅನ್ವಯಿಸುವುದಿಲ್ಲ. 20248 ಜ.1 ಹಾಗೂ ನಂತರ ಸಲ್ಲಿಸುವ ಅರ್ಜಿಗಳಿಗೆ ಪರಿಷ್ಕೃತ ಸೇವಾ ಶುಲ್ಕ ಅನ್ವಯಿಸುತ್ತದೆ. 11ಇ, ಅಲಿನೇಷನ್ ಪೂರ್ವ ನಕ್ಷೆ, ತತ್ಕಾಲ್ ಪೋಡಿಗೆ ನಗರ ಪ್ರದೇಶದ ಜಮೀನಿಗೆ ಗರಿಷ್ಠ ಮೊತ್ತ ಐದು ಸಾವಿರ ರೂ.ಗಳಿಂದ ಒಂದು ಸಾವಿರ ರೂ., ಗ್ರಾಮೀಣ ಪ್ರದೇಶದ ಜಮೀನಿಗೆ ನಾಲ್ಕು ಸಾವಿರ ರೂ.ಗಳಿಂದ 400 ರೂ.ಗೆ ಇಳಿಸಿದೆ. ಅದೇ ರೀತಿ ಹದ್ದುಬಸ್ತು ಸೇವಾ ಶುಲ್ಕ ನಗರ ಪ್ರದೇಶದ ಜಮೀನಿಗೆ ಗರಿಷ್ಠ ನಾಲ್ಕು ಸಾವಿರ ರೂ.ಗಳಿಂದ 300 ರೂ., ಗ್ರಾಮೀಣ ಪ್ರದೇಶಕ್ಕೆ ಮೂರು ಸಾವಿರರೂ.ಗಳಿಂದ 300 ರೂ.ಗೆ ಇಳಿಸಿದೆ. ಪರಿಷ್ಕೃತ ಆದೇಶದ ಪ್ರಕಾರ 11ಇ, ಅಲಿನೇಷನ್ ಪೂರ್ವನಕ್ಷೆ, ತತ್ಕಾಲ್ ಪೋಡಿಗೆ ನಗರ ಪ್ರದೇಶಕ್ಕೆ ಎರಡು ಎಕರೆವರೆಗೆ 2,500 ರೂ, ಎರಡು ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿ ಭಾಗಶಃ ಎಕರೆಗೆ ಒಂದು ಸಾವಿರ ರೂ., ಗ್ರಾಮೀಣ ಪ್ರದೇಶದ ಜಮೀನಿಗೆ ಕ್ರಮವಾಗಿ 1,500 ರೂ. ಹಾಗೂ 400 ರೂ. ನಿಗದಿಯಾಗಿದೆ. ಹದ್ದುಬಸ್ತು ಸೇವಾ ಶುಲ್ಕವು ನಗರ ಪ್ರದೇಶದ ಜಮೀನು ಎರಡು ಎಕರೆಗೆ ಎರಡು ಸಾವಿರ ರೂ., ಎರಡು ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿಭಾಗಶಃ ಎಕರೆಗೆ 400 ರೂ., ಗ್ರಾಮೀಣ ಪ್ರದೇಶಕ್ಕೆ ಕ್ರಮವಾಗಿ 500 ರೂ. ಮತ್ತು 300 ರೂ. ನಿಗದಿ ಪಡಿಸಲಾಗಿದೆ. ಅಲ್ಲದೆ, ನೋಟಿಸ್ ಶುಲ್ಕವನ್ನು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜುದಾರರಿಗೆ 25 ರೂ. ಗೊತ್ತುಪಡಿಸಲಾಗಿದೆ. ‘ಸ್ವಾವಲಂಬಿ’ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ಒಂದು ಸಾವಿರ ರೂ. ಶುಲ್ಕದಲ್ಲಿ ಬದಲಾವಣೆ ಮಾಡಿಲ್ಲ.
ಅಭಿಯಾನಕ್ಕೆ ಒತ್ತು :-
ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ `ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಎಲ್ಲ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ತ್ವರಿತವಾಗಿ ಒದಗಿಸಲು ಅನುವಾಗುವಂತೆ ಕ್ರಮ ಕೈಗೊಂಡಿದೆ. ಸರ್ಕಾರಿ ಭೂಮಾಪಕರ ಜತೆಗೆ ಪರವಾನಗಿ ಭೂಮಾಪಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ನೀಡುವ ಸೇವೆಗೆ ಸಾರ್ವಜನಿಕರ ಪಾವತಿಸುವ ಶುಲ್ಕದಿಂದಲೇ ನಿಗದಿತ ಸೇವಾ ಶುಲ್ಕ ಪಾವತಿಸಲಾಗುತ್ತಿದೆ. ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸಲು ಕ್ರಮವಹಿಸಿದ್ದು, ಪಹಣಿಯ ಕಾಲು-3ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಆದೇಶ ವಿವರಿಸಿದೆ.