WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ ರವರು ಮನೆಯಲ್ಲಿ ಮಲಗಿರುವಾಗ ಬೆಳಿಗ್ಗೆ 04.11 ಗಂಟೆಗೆ ಮನೆಯ ಮೇಲ್ಚಾವಣಿ ಕುಸಿದು ಅವರ ಮೇಲೆ ಬಿದ್ದು ಸದರಿಯವರು ಮಣ್ಣಿನಲ್ಲಿ ಹುದುಗಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ ಸದರಿ ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಸದರಿ ಅವರನ್ನು ಪತ್ತೆ ಮಾಡಿ ಮೃತ ದೇಹವನ್ನು ಹೊರಗಡೆ ತೆಗೆದಿದ್ದು ಇರುತ್ತದೆ.
ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ ವಯಸ್ಸು 75 ವರ್ಷ ಜಾತಿ ಹಿಂದೂ ಮರಾಠ ಉದ್ಯೋಗ ಕೂಲಿ ಕೆಲಸ ಸಾಕಿನ್ ರಾಮದುರ್ಗ
ಸದರಿ ಸ್ಥಳವನ್ನು ರಾಮದುರ್ಗ ಪೊಲೀಸ್ ಠಾಣಾ ಪಿಎಸ್ಐ ಸವಿತಾ ಮುನ್ಯಾಳ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.