WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಹಾಂತೇಶ ನಗರದಲ್ಲಿ ಜನಸಾಮಾನ್ಯರ ಹಿತರಕ್ಷಣಾ ಸಮಿತಿ, ವಲಯ ಅರಣ್ಯ ಇಲಾಖೆ ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ಪಟ್ಟಣದ ಮಹಾಂತೇಶನಗರ ಉದ್ಯಾನವನದಲ್ಲಿ ಸಸಿ ನೆಡುವ ಮುಖಾಂತರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸಸಿಗೆ ನೀರುಣಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಮನೆಗೊಂದು ಸಸಿ ನೆಟ್ಟು ಪಾಲನೆ ಪೋಷಣೆ ಮಾಡಿದಲ್ಲಿ ಪರಿಸರ ಸಂರಕ್ಷಣೆಯ ಧೈಯ ಪಾಲಿಸಿದಂತಾಗುತ್ತದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜನಸಾಮಾನ್ಯರ ಹಿರತಕ್ಷಣಾ ಸಮಿತಿಯ ಅಧ್ಯಕ್ಷ ಈರಣ್ಣ ಕಲ್ಯಾಣಿ, ವಲಯ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ, ವಿರೇಶ ಬಳಿಗೇರ, ಬಿ.ಎಲ್. ಸಂಕನಗೌಡ್ರ, ರಾಜೇಶ ಹರ್ಲಾಪೂರ, ಚಂದನ ಪಾಟೀಲ, ಪರ್ವೇಜ್ ಪಣಿಬಂದ, ಡಿ.ಎಫ್, ಹಾಜಿ, ಪ್ರಶಾಂತ ಅಂಗಡಿ, ಮಂಜುನಾಥ ಮಾದರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.