
WhatsApp Group
Join Now
ನವದೆಹಲಿ: ಚುನಾವಣೆಗೆ ಕೆಲವು ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿ
ಮಹಿಳಾ ದಿನಾಚರಣೆಯಂದೇ ಎಲ್
ಪಿಜಿ ಸಿಲಿಂಡರ್‌ಗೆ 100 ರೂ.ಗಳನ್ನು
ಕಡಿಮೆ ಮಾಡಲಾಗಿದೆ. ದೇಶದ
ಲಕ್ಷಾಂತರ ಮಹಿಳೆಯರ ಬದುಕನು
ಸರಾಗಗೊಳಿಸಲು ಈ ಘೋಷಣೆ
ಮಾಡಲಾಗಿದೆ ಎಂದು ಪ್ರಧಾನಿ
ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತಾಗಿ ಟ್ವಿಟ್ ಮಾಡಿರುವ
ಅವರು, ಇಂದು ಮಹಿಳಾ
ದಿನಾಚರಣೆ, ಹೀಗಾಗಿ ನಮ್ಮ ಸರ್ಕಾರ ಸಬ್ಸಿಡಿ ಇಲ್ಲದ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಕಡಿಮೆ ಮಾಡಲು ನಿರ್ಧರಿಸಿದೆ. ಇದು ದೇಶದ ಲಕ್ಷಾಂತರ ಮಹಿಳೆಯರ ಆರ್ಥಿಕ
ಹೊರೆಯನ್ನು ಕಡಿಮೆ ಮಾಡಲಿದೆ.
ವಿಶೇಷವಾಗಿ ನಾರಿಶಕ್ತಿಗೆ ಬಲ
ತುಂಬಲಿದೆ’ ಎಂದು ಹೇಳಿದ್ದಾರೆ.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ
ಇದು ಕಳೆದ 6 ತಿಂಗಳಲ್ಲಿ ನಡೆದ 2ನೇ ಇಳಿಕೆಯಾಗಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ 200 ರು. ಕಡಿಮೆ ಮಾಡಲಾಗಿತ್ತು.