ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿಗೆ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಇತ್ತೀಚೆಗೆ ನಿರ್ಮಿಸಲಾದ ಮಾಂಜರಿ-ಬವನ ಸವದತ್ತಿ ಸೇತುವೆ-ಕಮ್-ಬ್ಯಾರೇಜ್ ನಿರ್ಮಾಣಕ್ಕೆ ಅಡ್ಡಲಾಗಿ 3 ತಿಂಗಳ ನಂತರ ಕೊಚ್ಚಿ ಹೋಗಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕಳಪೆ ಗುಣಮಟ್ಟದ ಕಾಮಗಾರಿ ಯಿಂದಾಗಿ ಪ್ರಬಲವಾದ ನದಿ ಪ್ರವಾಹ ತಡೆಯದ ಸೇತುವೆಗ ಕುಸಿದಿದೆ ಎಂದು ಆರೋಪಿಸಿದ್ದಾರೆ. ರಾಯಬಾಗ, ಚಿಂಚಲಿ, ಕುಡಚಿ, ದಿಗ್ಗೇವಾಡಿ ಮುಂತಾದ ಹಲವಾರು ಗಡಿ ಗ್ರಾಮಗಳಿಗೆ ಸಂಪರ್ಕ ಸುಧಾರಿಸುವ ಉದ್ದೇಶದಿಂದ ಸೇತುವೆ ನಿರ್ಮಾಣ ಮಾಡಲಾಯಿತು. ಆದರೆ ಈಗ ಸಂಪೂರ್ಣ ನಿರುಪಯುಕ್ತ ವಾಗಿದೆ.
ಆರಂಭದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಸ್ವಾಗತ. ಕೋರಿದ್ದ ರೈತರು, ಈಗ 6.50 ಕೋಟಿ ಹಣ ನೀರು ಪಾಲಾಗಿರು ವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾರೇಜ್ ಆಗಿಯೂ ಸೇತುವೆ ಕಾರ್ಯ ನಿರ್ವಹಿಸುತ್ತಿತ್ತು. ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ಮೀರಜ್, ಇಂಗಳಿ ಮತ್ತು ಯಡೂರು ಮುಂತಾದ ಸ್ಥಳಗಳ ನಡುವಿನ ಪ್ರಯಾಣವನ್ನು ಸುಗಮ ಗೊಳಿಸುವ ಮೂಲಕ ರೈತರಿಗೆ ಮತ್ತು ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತಿತ್ತು. ಆದರೆ ಸೇತುವೆ ಕುಸಿತದಿಂದ, ಸ್ಥಳೀಯರು ತಮ್ಮ ದೈನಂದಿನ ಪ್ರಯಾಣದಲ್ಲಿ ದೊಡ್ಡ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ.
ಕುತ್ತಿಗೆ ವರೆಗಿನ ನೀರಿನಲ್ಲೇ ಗ್ರಾಮಸ್ಥರಿಂದ ಶವ ಸಾಗಾಟ: ಸೇತುವೆ ನಿರ್ಮಾಣಕ್ಕೆ 20 ಲಕ್ಷ ರೂ ಕೊಟ್ಟ ಜಿಲ್ಲಾಧಿಕಾರಿ!
ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಸಂಪರ್ಕವನ್ನು ಮರು ಸ್ಥಾಪಿಸಲು ತಕ್ಷಣ ದುರಸ್ತಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಿದ್ಧಾರ್ಥ್ ಗಾಯೋಗೋಳ್ ಒತ್ತಾಯಿಸಿದ್ದಾರೆ.
ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಥಣಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಬಿ.ಎಸ್. ಲಮಾಣಿ ಮಾತನಾಡಿ, ಸಂತ್ರಸ್ತ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಶೀಘ್ರವೇ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.