ಮಾಹಿತಿ ನೀಡದೆ ಇರುವುದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ : ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ

WhatsApp Group Join Now


ಮಡಿಕೇರಿ ಮಾಹಿತಿ ನೀಡದೆ ಸತಾಯಿಸೋದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ ಯಾವುದೇ ಮಾಹಿತಿ ಅರ್ಜಿಗೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು
ಕೊಡಗು ಜಿಲ್ಲೆ ಮಡಿಕೇರಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರ ಅರ್ಜಿ ಸ್ವೀಕರಿಸಿ ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ ಮಾತನಾಡಿದರು ಮಾಹಿತಿ ನೀಡದೆ ಸತಾಯಿಸೋದು ಸಹ ಒಂದು ರೀತಿಯ ಭ್ರಷ್ಟಾಚಾರವಿದ್ದಂತೆ ಯಾವುದೇ ಮಾಹಿತಿ ಅರ್ಜಿಗೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಬೇಕು ಸಾರ್ವಜನಿಕರು ಮಾಹಿತಿ ಕೇಳಿದಾಗ ಮಾಹಿತಿ ನೀಡುವುದು ಮೊದಲ ಆದ್ಯತೆ ಆಗಬೇಕು. ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸುವುದು ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ. ಕಾನೂನು ಬದ್ಧವಾಗಿ ಸರ್ಕಾರದ ನಿಯಮಾನುಸಾರ ಕೆಲಸಗಳನ್ನು ಮಾಡಬೇಕು. ಸಾರ್ವಜನಿಕರ ಕೆಲಸ ಆಗದಿರುವುದಕ್ಕೆ ಹಿಂಬರಹ ನೀಡಬೇಕು. ಸಾರ್ವಜನಿಕರಿಂದ ದೂರುಗಳು ಬಂದಾಗ ತಕ್ಷಣವೇ ಸ್ಪಂದಿಸಬೇಕು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿವರ್ಷ ಆಸ್ತಿದಾಯಕ ಪಟ್ಟಿ ವಿವರ ಸಲ್ಲಿಸಬೇಕು. ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರದ ನಾಮಫಲಕ ಅಳವಡಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಖಲಾತಿಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಲೋಕಾಯುಕ್ತ ಡಿವೈ ಎಸ್ ಪಿ ವಿ. ಕೃಷ್ಣಯ್ಯ ಹೇಳಿದರು
ಈ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್, ತಹಶೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

About The Author