ಮುಳ್ಳೂರ ಗುಡ್ಡದಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಹಾಗೂ ಮುಳ್ಳೂರು ಹೋಗುವ ಮಾರ್ಗದಲ್ಲಿ ಒಂದನೇ ತಿರುವಿನಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ

ಟಾಟಾ ಎಸ ಗೂಡ್ಸ್ ವಾಹನ ನಂಬರ್ KA 05 AQ 5172 ನೆದ್ದರ ಚಾಲಕ ಹೆಸರು ಅನಿಲ್ ರಮೇಶ್ ಬಿರಾದಾರ್ ವಯಸ್ಸು 21 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ಡ್ರೈವರ್ ಸಾಕಿನ್. ಶಾ ಬಜಾರ್ ನಗರ್ ಗುಲ್ಬರ್ಗ ಇವರು ಸಾವನ್ನಪ್ಪಿದ್ದಾರೆ. ಹಾಗೂ ಟಿವಿಎಸ್ ಜುಪಿಟರ್ ಸ್ಕೂಟಿ ನಂಬರ್ KA 69 H 2256 ನೆದ್ದರ ಸವಾರ- ಅಮೃತ ವಿಜಯಕುಮಾರ್ ಗಣಪತಿ ಗೋಡಬೋಲೇ ವಯಸ್ಸು 54 ವರ್ಷ ಜಾತಿ ಹಿಂದೂ ಬ್ರಾಹ್ಮನ ಉದ್ಯೋಗ ಅರ್ಚಕ ಸಾಕಿನ್ ಪಡಕೋಟಿ ಗಲ್ಲಿ ರಾಮದುರ್ಗ ಇವರು ಕೂಡ ಸಾವನ್ನಪ್ಪಿದ್ದಾರೆ

ಗಾಯಲುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಯಮನೂರೇಶ ಸಿದ್ದಪ್ಪ ಕಬಾಡಿ ವಯಸ್ಸು 26 ವರ್ಷ ಜಾತಿ ಹಿಂದೂ ಸಮಗಾರ ಉದ್ಯೋಗ – ಡ್ರೋನ್ ಪೈಲೆಟ್ ಸಾಕಿನ್ ನಿಡಗುಂದಿ ತಾಲೂಕ ನಿಡಗುಂದಿ ಜಿಲ್ಲಾ ವಿಜಯಪುರ ಹಾಗೂ ದರ್ಶನ್ ಬಸಯ್ಯ ಹಿರೇಮಠ ವಯಸ್ಸು 23 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ಡ್ರೋನ್ ಪೈಲೆಟ್ ಸಾಕಿನ್ ಕಲ್ಲದೇವರ ತಾಲೂಕ ಬ್ಯಾಡಗಿ ಜಿಲ್ಲಾ ಹಾವೇರಿ ಇವರನ್ನು ರಾಮದುರ್ಗದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನಾಸ್ಥಳಕ್ಕೆ ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ ಭೇಟಿ ನೀಡಿ ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author