ಯಡ್ರಾಂವಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯ ಯಡ್ರಾಂವಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲೆಯ ಎಲ್ಲ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಮತ್ತು ಎಸ್ ಡಿ ಎಂ ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಜೊತೆಗೂಡಿ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಹೆಮ್ಮೆಯ ಶಿಕ್ಷಕರಾದ ಶ್ರೀ ಆರ್ ಎಫ್ ಮಾಘಿ, ಶ್ರೀ ಆಯ್ ಜಿ ಉಳ್ಳಿಗೇರಿ, ಶ್ರೀ ಆಯ್ ಬಿ ನೇಸರ್ಗಿ, ಶ್ರೀ ಎಂ ಆರ್ ಮುದ್ದಣ್ಣವರ, ಶ್ರೀ ಪ್ರವೀಣ ಬಣಕಾರ್, ಶ್ರೀ ಎಸ್ ಬಿ ಹಲಕರಣಿ, ಶ್ರೀ ಪ್ರಸನ್ನ ಹೆಗಡೆ, ಶ್ರೀಮತಿ ರೂಪಾ ಚಲವಾದಿ, ಶ್ರೀ ಎ ಎಸ್ ಕರಾಳೆ, ಶ್ರೀ ಎಂ ಎನ್ ಪೆಟ್ಲೂರ, ಶ್ರೀ ಎಂ ಎಂ ಮಾದರ, ಶ್ರೀ ಎಸ್ ಡಿ ಬಿಂಗೆ, ಶ್ರೀ ಗುರುನಾಥ ಗುಡೆಣ್ಣವರ, ಶ್ರೀಮತಿ ರೇಣುಕಾ ಗಾಣಿಗೇರ ಎಲ್ಲ ಶಿಕ್ಷಕ, ಶಿಕ್ಷಕೀಯರನ್ನು ಶಾಲೆಯ ಮುದ್ದು ವಿದ್ಯಾರ್ಥಿಗಳು ಮತ್ತು ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಸೇರಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾದ ಶ್ರೀ ಸುರೇಶ ಕಾಳಪ್ಪನವರ , ಉಪಾಧ್ಯಕ್ಷರಾದ ಶ್ರೀಮತಿ ಸುಕನ್ಯ ಬೀಳಗಿ ಮತ್ತು ಸದಸ್ಯರಾದ ಶ್ರೀಮತಿ ವಾಣಿಶ್ರೀ ಬುಟ್ಟನ್ನವರ, ಶ್ರೀಮತಿ ವಿಜಯಲಕ್ಷ್ಮಿ ಹೊನ್ನಬಿಂದಿಗಿ ,ಶ್ರೀಮತಿ ರೇಣುಕಾ ಶಿರೂರ , ಶ್ರೀಮತಿ ಶೋಭಾ ಗಾಣಿಗೇರ, ಶ್ರೀಮತಿ ಪಾರ್ವತಿ ಕಡಕೋಳ , ಶ್ರೀಮತಿ ಜುಮೇಲಾ ತಬ್ಬಲಜಿ, ಶ್ರೀಮತಿ ವಿಜಯಲಕ್ಷ್ಮಿ ಹೊನ್ನಬಿಂದಗಿ, ಶ್ರೀ ಶಿವನಗೌಡ ಆರ್ ಮೇದಗೊಪ್ಪ , ಶ್ರೀ ಪರಶುರಾಮ ಖೋದಾನಪುರ, ಶ್ರೀ ಪಾಂಡುರಂಗ ಉಪ್ಪಾರ, ಮತ್ತು ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author