ಯಲ್ಲಮ್ಮನ ದೇವಸ್ಥಾನದ ಹುಂಡಿಗಳಲ್ಲಿ ಮಳೆ ನೀರು ಜಲಾವೃತವಾಗಿದ್ದ ಕಾಣಿಕೆ ಹುಂಡಿಗಳನ್ನ ಓಪನ್ ಮಾಡಿ ನೋಟುಗಳನ್ನ ಹೊರಗೆ ತೆಗೆದು ಒಣ ಹಾಕಿದ್ದಾರೆ.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ನೀರು ಹೋಗಿತ್ತು . ಅಲ್ಲಿ ಇದ್ದಂತ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದರಿಂದ ನೋಟುಗಳೆಲ್ಲ ತೊಯ್ದು ತೊಪ್ಪೆಯಾಗಿದ್ದವು. ಇದೀಗ ನೀರು ಕಡಿಮೆಯಾಗಿದ್ದರಿಂದ ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ಓಪನ್ ಮಾಡಿ ನೋಟುಗಳನ್ನು ದೇವಾಲಯದ ಆವರಣದಲ್ಲಿ ಒಣ ಹಾಕಿದ್ದಾರೆ.

ದೇವಾಲಯದ ಆವರಣದಲ್ಲಿನ ಎಲ್ಲ ನೀರನ್ನ ಹೊರ ಹಾಕಿ ಸ್ವಚ್ಚಗೊಳಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ.

About The Author