WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆ ರಾಮದುರ್ಗದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತರು. ರಕ್ಷಾ ಬಂಧನ ದಿನದಂದು ರಾಕಿ ಕಟ್ಟುವ ಮೂಲಕ
ದೇಶದ ಸೈನಿಕರು ಹಾಗೂ ಪೊಲೀಸರು ಕೂಡ ನಮ್ಮ ಕುಟುಂಬದವರೆ ಎನ್ನುವ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸುತಿದ್ದೇವೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರು ,ಜಿಲ್ಲಾ ಸಹ ಸಂಚಾಲಕರು ಶ್ರೀಮತಿ ಶಾಲಿನಿ ಇಳಿಗೇರ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು ಆದ. ಕೆ. ವಿ ಪಾಟೀಲ್ , ಮಂಡಲ ಸಂಚಾಲಕರು ಆದ ರಾಧಿಕಾ ಧೂತ್,ಸಹ ಸಂಚಾಲಕರು ಆದ ಮಂಜುಳಾ ಅಕ್ಕನವರ,ಗೀತಾ ಕಲ್ಲೂರ, ಬಿಜೆಪಿ ಮುಖಂಡರು ಹಾಗೂ ಎಲ್ಲಾ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.