ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ರಾಮದುರ್ಗದ ಜನತೆ ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹೋರಾಟದ ಭಾಗವಾಗಿ 2016-17 ರಿಂದ ಸರ್ವೇ ನಡೆದು 2019 ರಲ್ಲಿ ರೂ.1667 ಕೋಟಿ ಕ್ರೀಯಾ ಯೋಜನೆಯು ಆಗಿ ಕೆಲಸ ಪ್ರಾರಂಭವಾಗದೇ ಉಳಿದಿದೆ.
ಕೆಲಸ ಏಕೆ ಪ್ರಾರಂಭವಾಗಲಿಲ್ಲ ಎಂಬುದು ನಿಗೂಢವಾಗಿದೆ.
ಕೂಡಲೇ ಲೋಕಾಪೂರದಿಂದ ಧಾರವಾಡದವರೆಗೆ ರಾಮದುರ್ಗ ಸವದತ್ತಿ ರೈಲ್ವೆ ಮಾರ್ಗ ಪ್ರಾರಂಭ ಮಾಡಿ 3-4 ಜಿಲ್ಲೆಗಳ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರು ಹಾಗೂ ಸದಸ್ಯರು ಲೋಕೋ ಉಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿರವರಿಗೆ
ಮನವಿ ನೀಡಿ ಒತ್ತಾಯಿಸಿದರು.
ನಂತರ ಸಚಿವ ಸತೀಶ ಜಾರಕಿಹೊಳಿ ರವರು ಮಾತನಾಡಿ ಲೋಕಾಪೂರದಿಂದ ಧಾರವಾಡದವರೆಗೆ ರೈಲ್ವೆ ರಾಮದುರ್ಗ ಮಾರ್ಗ ಪ್ರಾರಂಭ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೂಮಿ ಕೊಡುವ ಕುರಿತು ಪತ್ರ ನೀಡುತ್ತೇನೆ ಎಂದು ಸುದ್ದಿಗಾರರ ಜೊತೆ ಮಾತನಾಡಿದರು.
ರೈಲ್ವೆ ಹೋರಾಟ ಮುಖಂಡರಾದ ಕುತಬುದ್ದೀನ್ ಖಾಜಿ, ವಿವರಿಸಿದರು
ಈ ಸಂಧರ್ಭದಲ್ಲಿ ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರು ಜಿ.ಎಮ್. ಜೈನೇಖಾನ್, ಮೊಹಮ್ಮದಶಫಿ ಬೆಣ್ಣಿ ಚಂದ್ರು ಮಾಳದಕರ , ಎಮ್.ಕೆ. ಯಾದವಾಡ, ಸುಭಾಷ ಘೋಡಕೆ,ಅಭಿಜೀತ ಮುನ್ನವಳ್ಳಿ, ದಾದಾಪೀರ ಕೆರೂರ ಸಂಜೆಯ ಕಪಾಲಿ, ಮಾನವ ಬಂಧುತ್ವ ವೇದಿಕೆ,ತಾಲೂಕಾ ಅಧ್ಯಕ್ಷ,ಭೀಮಶಿ ಕನಕನ್ನವರ ಮುಂತಾದವರು ಉಪಸ್ಥಿತರಿದ್ದರು.
(ವರದಿ, ಎಂ ಕೆ ಯಾದವಾಡ ರಾಮದುರ್ಗ)