ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿದ್ಯಾಚೇತನ ಶಾಲೆ ಆವರಣದಲ್ಲಿರುವ ಗುರುಭವನದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಕಲಿಕೆಯ ಗುಣಮಟ್ಟ ಕಡಿಮೆಯಾಗುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಕರು ಸಮಯ ಪ್ರಜ್ಞೆ ಹಾಗೂ ಶಿಸ್ತು ಅಳವಡಿಸಿಕೊಳ್ಳಬೇಕು. ನಾನು ಕೂಡಾ ಶಾಲೆಗೆ ಬೇಟಿ ನೀಡುತ್ತೇನೆ. ಶಿಕ್ಷಕರು ಗೈರು ಇದ್ದರೆ ಅವರ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುತ್ತೇನೆ. ಶಿಕ್ಷಣಾಧಿಕಾರಿಗಳು ಕೂಡಾ ಪ್ರತಿ ನಿತ್ಯ ಶಾಲೆಗೆ ಬೇಟಿ ನೀಡಬೇಕು ಹೇಳಿದರು.
ಭಾರತ ದೇಶ ಕಲೆ, ಸಾಹಿತ್ಯ, ತಾಂತ್ರಿಕತೆಯಿಂದ ವಿಶ್ವವೇ ಭಾರತವನ್ನು ನೋಡಲು ಹಗಲಿರಳು ಶ್ರಮಿಸಿದವರಲ್ಲಿ ಪ್ರಮುಖ ವ್ಯಕ್ತಿಗಳೆ ಶಿಕ್ಷಕರು. ಅದರಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಎಲ್ಲ ಶಿಕ್ಷಕ ವೃದ್ದದ ಪಾತ್ರ ಮಹತ್ವದ್ದಾಗಿದೆ ಎಂದರು.
ಕ್ಷೇತ್ರಕ್ಷಣಾಧಿಕಾರಿ ಎಸ್.ಆರ್. ಕಾಂಬಳೆ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರು ಕರ್ತವ್ಯ ಹಾಗೂ ಸಮಯ ಪ್ರಜ್ಞೆಯನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಇಲಾಖೆಯ ಎಲ್ಲ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ವಿಲೆವಾರಿ ಮಾಡಿ ಎಲ್ಲ ಶಿಕ್ಷಕರಿಗೆ ಸರ್ಕಾರದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಕಡಕೋಳ, ಸದಸ್ಯ ನಾಗರಾಜ ಕಟ್ಟಿಮನಿ, ತಾ.ಪಂ ಇಒ ಬಸವರಾಜ್ ಐನಾಪುರ, ಬಿಆರ್‌ಸಿ ಸಮನ್ವಯ ಅಧಿಕಾರಿ ಜಿ.ಸಿ. ಶೀಲವಂತಮಠ, ದೈಹಿಕ ಪರಿವೀಕ್ಷಕ ಎಸ್.ಆರ್. ಕನಕಪ್ಪನವರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ, ತಾಲೂಕಾ ಮಟ್ಟದ ಶಿಕ್ಷಕ ಸಂಘಟನೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮತ್ತು ಇ.ಸಿ.ಒ, ಬಿ.ಆರ್.ಪಿ, ಸಿ.ಆರ್.ಪಿ ಗಳು ಉಪಸ್ಥಿತರಿದ್ದರು.