ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯ ಅಧ್ಯಕ್ಷ, ರೈಲು ಹೋರಾಟ ಸಮಿತಿ ರಾಮದುರ್ಗ ಅಧ್ಯಕ್ಷರಾದ ಬಿ ಯು ಭೈರಕದಾರ ಮಾತನಾಡಿದ ಅವರು ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಒತ್ತಾಯಿಸಿ ರೈಲು ಹೋರಾಟ ಸಮಿತಿ ರಾಮದುರ್ಗ ಹಾಗೂ ವಿವಿಧ ಸಂಘಟನೆಗಳ ವೇದಿಕೆ ವತಿಯಿಂದ ಆಗಷ್ಟ 11 2025 ಸೋಮವಾರ ರಂದು ತಾಲೂಕು ಆಡಳಿತ ಭವನ ಮಿನಿ ವಿಧಾನಸೌಧದ ಮುಂದೆ ಉಪವಾಸ ಸತ್ಯಗ್ರಹ ಪ್ರಾರಂಭಿಸಲಾಗುವುದು ಹಾಗೂ ನಾವು ಸುಮಾರು ವರ್ಷಗಳಿಂದ ನಮ್ಮ ಮಾನವ ಹಕ್ಕು ಸಂಘಟನೆಯಿಂದ ಸಾರ್ವಜನಿಕರ ಮತ್ತು ರೈತರ ಹಿತದೃಷ್ಟಿಯಿಂದ ಸಾಕಷ್ಟು ಸಾರಿ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ಕಾರಣ ರಾಮದುರ್ಗಕ್ಕೆ ಹೊಸ ರೈಲು ಮಾರ್ಗಕ್ಕೆ ದಿನಾಂಕ 23/06/2025 ರಂದು ಮನವಿಯನ್ನು ತಮಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು ಇದೆ. ಆದರೂ ಯಾವುದೇ ರೀತಿ ನಮಗೆ ಸ್ಪಂದನೆ ಸಿಕ್ಕಿಲ್ಲ. ಅದಕ್ಕಾಗಿ ವಿವಿಧ ಸಂಘಟನೆಯ ಪದಾಧಿಕಾರಿಗಳು ರಾಮದುರ್ಗಕ್ಕೆ ಹೊಸ ರೈಲು ಮಾರ್ಗಕ್ಕೆ ಉಪವಾಸ ಸತ್ಯಾಗ್ರಹಕ್ಕಾಗಿ ಸೇರಿ ಕುಳಿತುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈಲು ಹೋರಾಟ ಸಮಿತಿಯ ಮುಖಂಡರಾದ ಡಿ ಎಫ್ ಹಾಜಿ, ಶಶಿಕಾಂತ್ ನೆಲ್ಲೂರ್, ರಾಜು ಹಾರ್ಲಾಪುರ, ಶಿವಾನಂದ್ ಮಿಲಾನಿ, ದಾದಾಪೀರ್ ಕೆರೂರ್ ಉಪಸ್ಥಿತರಿದ್ದರು.