ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.

WhatsApp Group Join Now

ಜನರ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿರುವ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಸಾಮಾಜಿಕ ಸೇವೆ ಮಾಡುವಲ್ಲಿ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿರುವ ರಾಮದುರ್ಗದ ವಿಜಯ ಸೇನಾ ಸಮಿತಿ, ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬೈಕ್ ಸಂಚಾರ ಮಾಡುವ ಸವಾರರು ತಮ್ಮ ಜೀವದ ರಕ್ಷಣೆಗೆ ಆದ್ಯತೆ ನೀಡಬೇಕು. ಅಪಘಾತವಾದಾಗ ಹೆಚ್ಚಿನ ಪ್ರಮಾಣದಲ್ಲಿ ಮೊದಲು ಪೆಟ್ಟು ಬಿಳುವದು ತಲೆಗೆ, ಇದರಿಂದ ಎಷ್ಟೋ ಜೀವಗಳು ಕಳೆದುಕೊಂಡ ಘಟನೆಗಳನ್ನು ಕಂಡಿದ್ದೇವೆ. ಇಂತಹ ಸನ್ನಿವೇಷಗಳನ್ನು ಕಂಡಿರುವ ವಿಜಯ ಸೇನಾ ಸಮಿತಿಯು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಿ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಈಗ ನೀಡಿರುವ ಹೆಲ್ಮೆಟನ್ನು ಬೈಕ್ ಸವಾರರು ಕಡ್ಡಾಯವಾಗಿ ಹಾಕಿಕೊಂಡು ಸಂಚರಿಸಬೇಕು ಎಂದು ಹೇಳಿದರು.
ವಿಜಯ ಸೇನಾ ಸಮಿತಿಯ ಮುಖ್ಯಸ್ಥ ವಿಜಯ ನಾಯಕ ಮಾತನಾಡಿ, ಎಷ್ಟೋ ಜನರು ಅಪಘಾತದಲ್ಲಿ ಮೃತಪಟ್ಟ ಘಟನೆಗಳನ್ನು ನೋಡಿದ್ದೇವೆ. ಆದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಎಸ್‌ಐ ಸವಿತಾ ಮುನ್ಯಾಳ ಸೇರಿದಂತೆ ವಿಜಯ ಸೇನಾ ಸಮಿತಿಯ ಇತರ ಸದಸ್ಯರು ಹಾಗೂ ಪೊಲೀಸ್ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದರು.

About The Author