ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 27 ವಾರ್ಡ್ ಗಳಿಗೆ ಸನ್ 2024-25 ನೇ ಸಾಲಿನಲ್ಲಿ ಶಾಸಕರ ಎಸ್.ಎಫ್.ಸಿ ವಿಶೇಷ ಅಭಿವೃದ್ಧಿ ಅನುದಾನದ 20.00 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಮದುರ್ಗ ಪುರಸಭೆಯಲ್ಲಿ ಇದ್ದಂತಹ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಎನ್ನದೆ ಪಟ್ಟಣದ 27 ವಾರ್ಡುಗಳಿಗೆ ಅಭಿವೃದ್ಧಿ ತಾರತಮ್ಯ ಮಾಡದೆ ಎಲ್ಲ ವಾರ್ಡಗಳಿಗೆ ನಾವು ಕೆಲಸ ಹಾಕಿದ್ದೇವೆ ನಮಗೆ ರಾಜಕೀಯ ಮುಖ್ಯವಲ್ಲ ರಾಮದುರ್ಗ ಪಟ್ಟಣವನ್ನು ಬೆಂಗಳೂರು ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು ಮುಖ್ಯ ಎಂದು ಹೇಳಿದರು.

1490.00 ಲಕ್ಷ ರೂ ದಲ್ಲಿ ರಾಮದುರ್ಗ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವುದು.
150.00 ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವದು.
10.00 ಲಕ್ಷ ರೂ ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ ಹೈಮಾಸ್ಟ್ ಅಳವಡಿಸುವದು. 50.00 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದಲ್ಲಿ ಸ್ವಾಗತ ಕಮಾನ ನಿರ್ಮಾಣ ಮಾಡುವುದು.
100.00 ಲಕ್ಷ ರೂ ವೆಚ್ಚದಲ್ಲಿ ವಿವಿಧ ವಾರ್ಡಗಳಲ್ಲಿ ಸಾರ್ವಜನಿಕರಿಗೆ
ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವದು. 50.00 ಲಕ್ಷ ರೂ ವೆಚ್ಚದಲ್ಲಿ
ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುದು. 50.00 ಲಕ್ಷ ರೂ ವೆಚ್ಚದಲ್ಲಿ ಪುರಸಭೆಯ ಸಾಂಸ್ಕೃತಿಕ ಭವನ ಅಭಿವೃದ್ಧಿಪಡಿಸುವದು. 100.00 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದ ವೀರಶೈವ ಸಮಾಜದ ಸ್ಮಶಾನ ಹಾಗೂ ಮುಕ್ತಿಧಾಮ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು .

ಶಾಸಕ ಅಶೋಕ್ ಪಟ್ಟಣ ಅವರು ರಾಮದುರ್ಗ ಪಟ್ಟಣವನ್ನು ಅಭಿವೃದ್ಧಿಪಡಿಸಲು 20 ಕೋಟಿ ಅನುದಾನದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಪಟ್ಟಣದ ವಿವಿಧ ವಾರ್ಡ್ ಗಳಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಲಕ್ಷ್ಮಿ ಜ. ಕಡಕೋಳ, ಉಪಾಧ್ಯಕ್ಷರು ಸರಿತಾ ಜಿ. ದೂತ, ಸ್ಥಾಯಿ ಸಮಿತಿ ಚೇರ್ಮನ್ ರಾಜು ಎಸ್ ಬೆಂಬಳಗಿ, ಯೋಜನಾ ನಿರ್ದೇಶಕರು ಜಿ. ನ. ಕೋ ಬೆಳಗಾವಿ ಮಲ್ಲಿಕಾರ್ಜುನ ಕಲಾದಗಿ, ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ವಿ ಎಸ್ ತಡಸಲೂರು, ಸಹಾಯಕ ಕಾರ್ಯ ಪಾಲಕ ಅಭಿಯಂತರರು ಜಿ. ನ. ಕೋ ಬೆಳಗಾವಿ ಎ.ಬಿ ರಜಪೂತ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಕೆ ಗುಡದಾರಿ,
ಪುರಸಭೆ ಸದಸ್ಯರಾದ ರಾಘವೇಂದ್ರ ರಾ. ದೊಡಮನಿ, ನಾಗರಾಜ ಎಸ್.ಕಟ್ಟಿಮನಿ, ಸಂಗೀತಾ ಸಿ ರಾಯಬಾಗ, ಮಾಬುಸಾಬ ಗೌ ತೋರಗಲ್ಲ, ರಘುನಾಥ ಜಿ. ರೇಣಕೆ, ಸುನಿತಾ ಆರ್. ಬೀಳಗಿ, ರೇಶ್ಯಾಬಿ ಆರ್. ಮುದಕವಿ, ಶಂಕರಪ್ಪ ಮ. ಬೆನ್ನೂರ, ರಾಣಿ ಎಸ್. ಬೋಕರೆ, ಶಾರವ್ವ ಶಿ. ಶಿರಿಯಣ್ಣವರ, ಲಕ್ಷ್ಮೀಬಾಯಿ ಸಿ. ಹಂಚಾಟೆ
ಹುಸೇನಸಾಬ ಎಸ್. ಐನಾಪೂರ,
ಸಲೀಮಾ ಇ. ಚೂರಿಖಾನ, ಲಕ್ಷ್ಮೀ ಪಿ. ಬರ್ಗೆ,
ಪಾರ್ವತಿ ರ. ನಾಯಕ, ಪದ್ಮಾವತಿ ಎಸ್. ಶಿಲ್ಲಿಂಗಪ್ಪನವರ, ಮಂಜುನಾಥ ಎಸ್. ರಾವಳ, ರಾಜೇಶ್ವರಿ ಅ. ಮೆಟಗುಡ್ಡ, ಇಮಾಮಸಾಬ ಎಮ್. ಕಲಾದಗಿ, ದುರಗಪ್ಪ ಕೆ. ಬಂಡಿವಡ್ಡರ, ಶಾನೂರ ಇ. ಯಾದವಾಡ, ಶಂಕರಪ್ಪ ರೇ. ಸೊಳೆಬಾಂವಿ, ಪ್ರಲ್ಲಾದ ಎಮ್. ಬಡಿಗೇರ, ಗೀತಾ ಎಲ್. ದೊಡಮನಿ,
ನಾಮ ನಿರ್ದೇಶಿತ ಸದ್ಯಸರು ಸುರೇಶ ಆರ್. ಫತ್ತೇಪೂರ ನವೀನ ಬ. ಗದಗ, ಚಿದಾನಂದ ಎಸ್. ದೊಡಮನಿ, ಗಾಯತ್ರಿ ದೇವಾಂಗಮಠ,
ಎಮ್. ಎಚ್. ನದಾಫ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು