ಶ್ರೀರಾಮ ಜನ್ಮಭೂಮಿ ಮಂದಿರದ ಪರಿಚಯ

WhatsApp Group Join Now

ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯ
ಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ಮಾಣ.
ಪೂರ್ವ-ಪಶ್ಚಿಮವಾಗಿ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ
ಅಳತೆಯಲ್ಲಿ ಮಂದಿರ ನಿರ್ಮಾಣ.

3 ಮಹಡಿಗಳ ಮಂದಿರ – ಪ್ರತಿ ಮಹಡಿಯ ಎತ್ತರ 20 ಅಡಿ, ಒಟ್ಟು 392 ಸ್ತಂಭಗಳು
ಮತ್ತು 44 ಬಾಗಿಲುಗಳು.
ನೆಲಮಹಡಿಯ ಗರ್ಭಗೃಹದಲ್ಲಿ ಶ್ರೀರಾಮಲಲ್ಲಾ(ಬಾಲರಾಮ)ನ ವಿಗ್ರಹ ಮತ್ತು
ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಶ್ರೀರಾಮ ದರ್ಬಾರ್.
ಒಟ್ಟು 5 ಮಂಟಪಗಳು – ನೃತ್ಯಮಂಟಪ, ರಂಗಮಂಟಪ, ಸಭಾಮಂಟಪ, ಪ್ರಾರ್ಥನಾ
ಮಂಟಪ ಮತ್ತು ಕೀರ್ತನಾಮಂಟಪ.
ಸ್ತಂಭಗಳು ಮತ್ತು ಬಾಗಿಲುಗಳ ಮೇಲೆ ದೇವಾಧಿದೇವತೆಗಳ ಮತ್ತು ದೇವಾಂಗನೆಯರ
ಮೂರ್ತಿಗಳು.
16.5 ಅಡಿ ಎತ್ತರವನ್ನು 32 ಮೆಟ್ಟಿಲುಗಳಲ್ಲಿ ಕ್ರಮಿಸಿ, ಸಿಂಹದ್ವಾರದ ಮೂಲಕ
ಪೂರ್ವದಿಕ್ಕಿನಿಂದ ಮಂದಿರಕ್ಕೆ ಪ್ರವೇಶ.
ದಿವ್ಯಾಂಗರು ಮತ್ತು ವೃದ್ಧರಿಗಾಗಿ ಜಾರು ಮೆಟ್ಟಿಲು (Ramp) ಮತ್ತು ಲಿಫ್ಟ್ ವ್ಯವಸ್ಥೆ.
ಆಯತಾಕಾರವಾಗಿ ಮಂದಿರದ ಸುತ್ತಲೂ ಪರಿಕ್ರಮ- ಉದ್ದ 732 ಮೀಟರ್, ಅಗಲ
4.25 ಮೀಟರ್.
ಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು- ಭಗವಾನ್ ಸೂರ್ಯ,
ಭಗವಾನ್ ಶಂಕರ, ಭಗವಾನ್ ಗಣಪತಿ, ದೇವಿ ಭಗವತೀ, ದಕ್ಷಿಣ ದಿಕ್ಕಿನಲ್ಲಿ
ಹನುಮಂತ ಮತ್ತು ಉತ್ತರ ದಿಕ್ಕಿನಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಮಂದಿರ.
ಮಂದಿರದ ಸಮೀಪದಲ್ಲಿ ಪೌರಾಣಿಕ ಕಾಲದ ಸೀತಾ ಕೊಳ.
ಶ್ರೀರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಪ್ರಸ್ತಾವಿತ ಅನ್ಯ ಮಂದಿರಗಳು-
ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ರ, ನಿಷಾದರಾಜ ಗುಹ,
ಮಾತಾ ಶಬರೀ ಮತ್ತು ದೇವಿ ಅಹಲ್ಯಾ.

ನೈರುತ್ಯ ಭಾಗದಲ್ಲಿ ನವರತ್ನ ಕುಬೇರ ಪೀಠದಲ್ಲಿ ಸ್ಥಿತನಾದ ಶಿವ ಮಂದಿರದ
ಜೀರ್ಣೋದ್ಧಾರ ಮತ್ತು ರಾಮಭಕ್ತ ಜಟಾಯು ರಾಜನ ಪ್ರತಿಮೆಯ ಸ್ಥಾಪನೆ.
ವಿಶ್ವದ ಎಲ್ಲಾ ರಾಮಭಕ್ತರಲ್ಲಿ ಒಂದು ನಿವೇದನೆ
ಶ್ರದ್ಧೆಯ ಮಾತಾ-ಭಗಿನಿಯರೇ ಮತ್ತು ಸಹೋದರರೇ,
ಯುಗಾಬ್ದ 5125 ವಿಕ್ರಮ ಸಂವತ್ಸರ 2080 ಶಾಲಿವಾಹನ ಶಕೆ 1946 ಶ್ರೀ ಶೋಭಕೃನ್ನಾಮ
ಸಂವತ್ಸರ, ಉತ್ತರಾಯಣ, ಹೇಮಂತಋತು, ಪುಷ್ಯಮಾಸ, ಶುಕ್ಲಪಕ್ಷ, ದ್ವಾದಶಿ, ಸೋಮವಾರ
ದಿನಾಂಕ:22.01.2024
ಈ ಶುಭದಿನದಂದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ
ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ
(ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯು ನೆರವೇರಲಿದೆ.

ದಿನಾಂಕ: 22.01.2024 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.00 ರ ಮಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ
ನಡೆಯಲಿದೆ. ಅಯೋಧ್ಯಾ ನಗರಿಯಲ್ಲಿ ಈ ಸಂದರ್ಭದಲ್ಲಿ ಅಭೂತಪೂರ್ವ ಸಂಭ್ರಮದ
ವಾತಾವರಣವು ನಿರ್ಮಾಣವಾಗಲಿದೆ. ಈ ಅಮೃತ ಘಳಿಗೆಯಲ್ಲಿ, ತಾವೂ ಸಹ ತಮ್ಮ ತಮ್ಮ ಗ್ರಾಮ,
ಮೊಹಲ್ಲಾ, ಕಾಲೋನಿ, ಬಸ್ತಿಗಳಲ್ಲಿರುವ ಮಂದಿರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು.
ಮಂದಿರ ಕೇಂದ್ರಿತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವುದು. ಆಯಾ ಗ್ರಾಮದಲ್ಲಿರುವ
ಮಂದಿರದಲ್ಲಿ ಆಸುಪಾಸಿನಲ್ಲಿರುವ ರಾಮಭಕ್ತರನ್ನು ಒಗ್ಗೂಡಿಸಿ, ಕಾರ್ಯಕ್ರಮವನ್ನು ಆಯೋಜಿಸುವುದು.
ದೂರದರ್ಶನ(TV) ಅಥವಾ LED ಪರದೆ ಅಥವಾ ಪ್ರೊಜೆಕ್ಟರ್ ಹಾಗೂ ಯಾವುದೇ ತರಹದ ಪರದೆಯಲ್ಲಿ
ಅಯೋಧ್ಯೆಯ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವ್ಯವಸ್ಥೆಯನ್ನು ಮಾಡುವುದು. ಆಯಾ
ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿಗಳನ್ನು
ಮಾಡುವುದು. “ಶ್ರೀರಾಮ ಜಯರಾಮ ಜಯಜಯರಾಮ” ವಿಜಯ ಮಹಾಮಂತ್ರವನ್ನು
ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು. ಇದರ ಜೊತೆಗೆ ಹನುಮಾನ್ ಚಾಲಿಸಾ,
ಸುಂದರಕಾಂಡ ಪಾರಾಯಣ, ರಾಮರಕ್ಷಾಸ್ತೋತ್ರದ ಪಠಣಗಳನ್ನೂ ಸಹ ಜೋಡಿಸಿಕೊಳ್ಳಬಹುದು.
ಇದರಿಂದ ಎಲ್ಲಾ ದೇವಾಧಿದೇವತೆಗಳು ಪ್ರಸನ್ನರಾಗಲಿ ಮತ್ತು ವಾತಾವರಣವು ಸಾತ್ವಿಕವಾಗಿ
ರಾಮಮಯವಾಗಲಿ, ಪ್ರತಿಷ್ಠಾಪನೆಯ ನಂತರ ಶಂಖನಾದ ಮತ್ತು ಘಂಟಾನಾದದೊಂದಿಗೆ ಆರತಿ ಮತ್ತು
ಪ್ರಸಾದದ ವಿತರಣೆಯನ್ನು ಮಾಡುವುದು, ಈ ಶುಭದಿನದಂದು ಎಲ್ಲಾ ದೂರದರ್ಶನ ಚಾನೆಲ್‌ಗಳಲ್ಲಿ ಪ್ರಾಣ
ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ.
ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ
ಎಲ್ಲಾ ದೇವಾಧಿದೇವತೆಗಳನ್ನು ಪ್ರಸನ್ನಗೊಳಿಸಲು ದೀಪಗಳನ್ನು ಬೆಳಗುವುದು. ಜಗತ್ತಿನ ಕೋಟಿ
ಕೋಟಿ ಮನೆಗಳ ಮುಂದೆ ದೀಪೋತ್ಸವವು ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ
ಜ್ಯೋತಿರ್ಮಯವಾಗುವುದು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನದ ನಂತರ ಪ್ರಭು ಶ್ರೀ ರಾಮಲಲ್ಲಾ(ಬಾಲರಾಮನ)
ದರ್ಶನ ಮತ್ತು ನವನಿರ್ಮಿತ ಭವ್ಯ ಜನ್ಮಭೂಮಿ ಮಂದಿರವನ್ನು ದರ್ಶಿಸಲು ತಮಗೆ ಅನುಕೂಲದ
ಸಮಯದಲ್ಲಿ ಪರಿವಾರ ಸಮೇತರಾಗಿ ಅಯೋಧ್ಯಾನಗರಿಗೆ ಬರುವಂತೆ ಮತ್ತು ಅದರಿಂದ ಪ್ರಭು
ಶ್ರೀರಾಮಚಂದ್ರನ ಸಂಪೂರ್ಣ ಕೃಪೆಗೆ ಪಾತ್ರರಾಗುವಂತೆ ತಮ್ಮಲ್ಲಿ ವಿನಂತಿಸುತ್ತೇವೆ.
ವಿ.ಸೂ.: ಈ ಪ್ರತಿಷ್ಠಾಪನೆಯ ದಿನ ಯಾವುದೇ ಮೆರವಣಿಗೆ, ಶೋಭಾಯಾತ್ರೆ, ಸಾರ್ವಜನಿಕ ಕಾರ್ಯಕ್ರಮ ಮತ್ತು
ಪಟಾಕಿ ಸಿಡಿಸುವುದಕ್ಕೆ ಅವಕಾಶವಿರುವುದಿಲ್ಲ.

About The Author