ಅಯೋಧ್ಯೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಶ್ರೀ ರಾಮನ ದಿವ್ಯಮೂರ್ತಿ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಅಂಗವಾಗಿ ರಾಮದುರ್ಗ ಪಟ್ಟಣದ ತಾಲೂಕು ಆಸ್ಪತ್ರೆ ಮುಂದೆ ಪುನೀತ್ ಫೌಂಡೇಶನ್ ಹಾಗೂ ಜನಸಾಮಾನ್ಯರ ರಕ್ಷಣಾ ಸಮಿತಿ ಹಾಗೂ ಮುಸ್ಲಿಂ ಬಾಂಧವರು ಜೊತೆಗೂಡಿ ಕ್ಷೀರಾಭಿಷೇಕ ಜೊತೆಗೆ ಸಿಹಿಯನ್ನು ಹಂಚಿ ಭಾವೈಕ್ಯತೆಯನ್ನು ಸಾರಿದರು
ಅಂಜುಮನ್ ಇಸ್ಲಾಂ ಕಮಿಟಿಯ ತಾಲೂಕು ಅಧ್ಯಕ್ಷ ಹಾಜಿ ಮಾತನಾಡಿ‘ಶಬರಿ ಕೊಳ್ಳ’ ಈ ಊರಿನ ಹೆಸರಿನಲ್ಲಿಯೇ ‘ರಾಮ’ನಾಮ ಇದೆ. ರಾಮನಾಮ ಇರುವ ರಾಮದುರ್ಗದಲ್ಲಿ ‘ಶಬರಿ’ಕೊಳ್ಳ ಎನ್ನುವ ಪುಣ್ಯ ಕ್ಷೇತ್ರವೂ ನೆಲೆಸಿದೆ.
ರಾಮಾಯಣದಲ್ಲಿ ರಾಮ ಹಾಗೂ ಶಬರಿಯ ಕಥೆ ಎಲ್ಲರೂ ಕೇಳಿರಬಹುದು. ಅಯೋಧ್ಯೆಯ ಪುರಷೋತ್ತಮ ರಾಮನ ಬರುವಿಕೆಗೆ ಶಬರಿ ಹಗಲಿರುಳು ಕಾಯ್ದ ಪ್ರಸಂಗ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಕೊನೆಗೂ ಶಬರಿಗೆ ರಾಮನ ದರ್ಶನವಾಗುತ್ತದೆ. ಆತನಿಗಾಗಿ ಪ್ರೀತಿಯಿಂದ ಬೋರೆ ಹಣ್ಣು ನೀಡುತ್ತಾಳೆ. ಭಕ್ತೆ ಶಬರಿ ನೀಡಿ ಹಣ್ಣು-ಹಂಪಲ ಸೇವಿಸಿ ರಾಮ ಸಂತಸ ಪಡುತ್ತಾನೆ. ಹೀಗೆ ರಾಮ ಹಾಗೂ ಶಬರಿ ಸಂಧಿಸಿದ ಜಾಗವೇ ಈ ಶಬರಿ ಕೊಳ್ಳ ಎನ್ನುವರು.
ಸಿ ಎಸ್ ಬೆಂಬಲಗಿ ಕಾಲೇಜಿನ ಪ್ರಾಚಾರ್ಯರು ಎಸ್ ಎಂ ಸಕ್ರಿ ಮಾತನಾಡಿ ಶ್ರೀರಾಮ ಎಂದಾಕ್ಷಣ ನೆನಪಾಗುವುದೇ ಆತನ ಪರಮ ಭಕ್ತೆ ಶಬರಿ. ಭಗವಂತನ ಬರುವಿಕೆಗಾಗಿ ಹಲವು ವರ್ಷಗಳಿಂದ ಕಾಯ್ದು ಕುಳಿತಿದ್ದ ಶಬರಿಗೆ ಶ್ರೀರಾಮನ ಆಗಮನದಿಂದ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ. ಹೂವಿನ ಹಾಸಿಗೆಯೊಂದಿಗೆ ಸ್ವಾಗತಿಸಿ, ಆಶ್ರಮದಲ್ಲಿದ್ದ ಎಂಜಲು ಮಾಡಿದ ಸಿಹಿಯಾದ ಬೋರೆ ಹಣ್ಣನ್ನು ಕೊಟ್ಟು ಆಶ್ರಯ ನೀಡಿದ ಸ್ಥಳ ಶಬರಿ ಕೊಳ್ಳ. ಇಂದಿಗೂ ಯಾವ ಕಾಲಕ್ಕೂ ಬತ್ತದ ಎರಡು ಸಿಹಿ ನೀರಿನ ಹೊಂಡಗಳು ಇಲ್ಲಿವೆ.
ಈ ಒಂದು ಕಾರ್ಯಕ್ರಮದಲ್ಲಿ ಪುನೀತ್ ಫೌಂಡೇಶನ್ ಅಧ್ಯಕ್ಷರಾದ ರಾಜೇಶ್ ಹರ್ಲಾಪುರ್. ಜನಸಾಮಾನ್ಯರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಈರಣ್ಣ ಕಲ್ಯಾಣಿ. ಡಾ. ಈರಣ್ಣ ಕಲಾದಗಿ. ಮಂಜುನಾಥ್ ದೊಡ್ಡಮನಿ. ಇನ್ನೂ ಅನೇಕ ತಾಲೂಕಿನ ಮುಖಂಡರು ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ಶ್ರೀ ರಾಮನ ದಿವ್ಯಮೂರ್ತಿ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೀರಾಭಿಷೇಕ ಕಾರ್ಯಕ್ರಮ ಜರಗಿತು.

WhatsApp Group
Join Now