ಸವದತ್ತಿ ಪಟ್ಟಣದ ಶಾಸಕ ವಿಶ್ವಾಸ ವೈದ್ಯ ರವರ ಗೃಹ ಕಚೇರಿಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ವತಿಯಿಂದ 2023-24 ನೇ ಸಾಲಿನ ವಿಶೇಷ ಜಾತ್ರಾ ಅವಧಿಯಲ್ಲಿ ಶ್ರೀ ಕ್ಷೇತ್ರ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಕೈಕೊಂಡ ಮೂಲಭೂತ ಸೌಲಭ್ಯಗಳ ಕೂರಿತು ಅಧಿಕಾರಿಗಳೊಂದಿಗೆ ಸಭೆನಡೆಸಿದೆ.
ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ವಾರ್ಷಿಕ ವಿಶೇಷ ಜಾತ್ರೆಗಳಾದ ಜನೇವರಿ 25 ರ ಬನದ ಹುಣ್ಣಿವೆ ಹಾಗೂ ಫೆಬ್ರುವರಿ-24 ರ ಭಾರತ ಹುಣ್ಣಿವೆ ನಿಮಿತ್ಯ ಪ್ರತಿ ವರ್ಷದ ಜಾತ್ರೆಗಳು ಜನೆವರಿ ತಿಂಗಳ ಎಳ್ಳ ಅಮವಾಸೆಯಿಂದ ಮಾರ್ಚ ತಿಂಗಳ ಶಿವರಾತ್ರಿ ಅಮವಾಸೆ ವರೆಗಿನ ಎರಡು ತಿಂಗಳ ಅವಧಿಯಲ್ಲಿ ನಿರಂತರವಾಗಿ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಆಗಮಿಸಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದು ತಮ್ಮ ಸಾಂಪ್ರದಾಯಕ ವಿಧಿ- ವಿಭಾಗಳನ್ನು ಆಚರಿಸಿ ಪುನಿತರಾಗುತ್ತಾರೆ. ಈ ಅವಧಿಯಲ್ಲಿ ಸುಮಾರು 30 ರಿಂದ 40 ಲಕ್ಷ ಭಕ್ತರು ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಹೀಗೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಹೆಚ್ಚಿನ ಭಕ್ತರಿಗೆ ದೇವಸ್ಥಾನದ ವತಿಯಿಂದ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗಿದೆ.
65 ವರ್ಷ ಹಾಗೂ ಮೇಲ್ಪಟ್ಟ ವಯೋವೃದ್ಧರಿಗೆ ಪ್ರತ್ಯಕ ದರ್ಶನದ ವ್ಯೆವಸ್ಥೆ.ಸಾಲಿನಲ್ಲಿ ಶೌಚಾಲಯ, ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ.ಪವಿತ್ರ ಎಣ್ಣೆಹೊಂಡದಲ್ಲಿ ಮಹಿಳೆಯರಿಗ ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ,ಮುಖ್ಯ ದೇವಾಲಯದ ಸುತ್ತಲಿನ ಸ್ಥಳಗಳಲ್ಲಿ ಶೌಚಾಲಯ, ಲಗೇಜ್ ಕೌಂಟರ್ ಹಾಗೂ ಪಾದರಕ್ಷೆ ಬಿಡಲು ವ್ಯವಸ್ಥೆ,ಸೆಂಟ್ರಲೈಜ್ ಮೈಕ್ ವ್ಯವಸ್ಥೆ, ಸಿಸಿ ಕ್ಯಾಮೆರಾಗಳ ವ್ಯವಸ್ಥೆ, ಪೋಲೀಸ್ ಸಹಾವಾಣಿ ಕೇಂದ್ರ ವ್ಯವಸ್ಥೆ,ಹಳೆಯ 7 ಹೈಮಾಸ್ಕ್ ವಿದ್ಯುತ್ ದೀಪಗಳ ಹೊರತಾಗಿ ಒಟ್ಟು 22 ಹೆಚ್ಚುವರಿ ಹೈಮಾಸ್ಕಗಳನ್ನು ಅಳವಡಿಸಲಾಗಿದೆ,ವ್ಯಾಪಕ ವಾಹನ ಪಾರ್ಕಿಂಗ್, ಪೋಲೀಸ್ ಬಂದೋಬಸ್ತ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಹಾಗೂ ಸ್ನಾನಗೃಹಗಳ ವ್ಯವಸ್ಥೆ,ಭಕ್ತರಿಗೆ ಪ್ರಾಥಮಿಕ ವೈದ್ಯಕೀಯ ಹಾಗೂ ಆಂಬುಲೆನ್ಸ್ ವ್ಯವಸ್ಥೆ, ಪಶುವೈದ್ಯಕೀಯ ವ್ಯವಸ್ಥೆ, ಸುಗಮ ಸಂಚಾರ ನಿರ್ವಹಣೆ ವ್ಯವಸ್ಥೆ,ತುರ್ತು ಕಸವಿಲೇವಾರಿ ವ್ಯವಸ್ಥೆ,ವ್ಯಾಪಕ ವ್ಯಾಪಾರಿ ಮಳಿಗೆಗಳು,302 ಕೊಠಡಿಗಳ ವಸತಿನ ಸೌಕರ್ಯ,ಬೈಪಾಸ್ ಬ್ರಿಡ್ಜ್ ಮೇಲೆ ಸಂಚಾರ ಪ್ರಾರಂಭಿಸಲಾಗಿದೆ,ಚಕಡಿಗಳೊಂದಿಗೆ ಬರುವ ಜಾನುವಾರಗಳಿಗೆ ಕುಡಿಯುವ ನೀರು ಹಾಗೂ ಉಚಿತ ಮೇವಿನ ಸೌಲಭ್ಯ,ಹೆಚ್ಚಿನ ಕೆಎಸ್‌ಆರ್‌ಟಿಸಿ ವಾಹನಗಳ ಸಂಚಾರ,ಉಚಿತ ಅನ್ನದಾಸೋಹ, ಎಲ್ಇಡಿ ಸ್ಕ್ರೀನ್ ವ್ಯೆವಸ್ಥೆ
ಹಾಗೂ ಇನ್ನಿತರ ವ್ಯವಸ್ಥೆ ಮಾಡಲಾಗಿದೆ.
ಈ ಸಂಧರ್ಭದಲ್ಲಿ ತಹಶೀಲ್ದಾರರಾದ ಶ್ರೀ ಮಲ್ಲಿಕಾರ್ಜುನ ಹೆಗ್ಗಣ್ಣವರ,ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ SPB ಮಹೇಶ್, ಪೊಲೀಸ್ ಅಧಿಕಾರಿಗಳಾದ ಶ್ರೀ ಧರ್ಮರಾಜ ಧರ್ಮಟ್ಟಿ, ಆನಂದ ಕ್ಯಾರಕಟ್ಟಿ, ತಾಲೂಕಾ ವೈದ್ಯಧಿಕಾರಿಗಳಾದ ಡಾ. ಶ್ರೀಪಾದ ಸಬನಿಸ್, ಎಕ್ಸೈಸ್ ಅಧಿಕಾರಿ ಶ್ರೀಶೈಲ್ ಅಕ್ಕಿ ಸೇರಿ ತಾಲೂಕಾ ಅಧಿಕಾರಿಗಳು ಉಪಸ್ಥಿತರಿದ್ದರು.