ಶ್ರೀ ಸುರೇಶ ಎಸ್ ಕಾಳಪ್ಪನವರ ವಕೀಲರಿಗೆ ರಾಷ್ಟ್ರ ಮಟ್ಟದ ಆದರ್ಶ ಸಮಾಜ ಸೇವಕ ಪ್ರಶಸ್ತಿ

WhatsApp Group Join Now

ದಿನಾಂಕ 07/09/2025 ರಂದು ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀ ಮಾತಾ ಪ್ರಕಾಶನ ಕರ್ನಾಟಕ ಹಾಗೂ ಸುದ್ದಿ ಸದ್ದು ಪಾಕ್ಷಿಕ ಪತ್ರಿಕೆ ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆದರ್ಶ ಸಮಾಜ ಸೇವಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅಖಿಲ ಕರ್ನಾಟಕ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನವನ್ನು ರಂಗಾಯಣ ಸಂಸ್ಕೃತಿಕ ಸಮುಚ್ಚಯ ಸಭಾ ಭವನ ಧಾರವಾಡದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀ ಸುರೇಶ ಎಸ್ ಕಾಳಪ್ಪನವರ ವಕೀಲರು ಹಾಗೂ ಸಮಾಜ ಸೇವಕರು ಇವರ ಸಮಾಜಮುಖಿ ಕಾರ್ಯಗಳನ್ನು ಗುರ್ತಿಸಿ ರಾಷ್ಟ್ರಮಟ್ಟದ ಆದರ್ಶ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About The Author